×
Ad

ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಬಳಸಿ ಫೋನ್‌ಪೇ ಮೂಲಕ ಹಣ ವರ್ಗಾವಣೆ; ದೂರು

Update: 2023-12-16 21:38 IST

ಮಂಗಳೂರು, ಡಿ.16: ರಸ್ತೆಯಲ್ಲಿ ಸಿಕ್ಕಿದ ಮೊಬೈಲ್‌ನ್ನು ಬಳಸಿದ ವ್ಯಕ್ತಿಯೊಬ್ಬ ಮೊಬೈಲ್ ವಾರಸುದಾರರ ಪೋನ್ ಪೇ ಬಳಸಿ ಹಣವನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ದೂರು ನೀಡಲಾಗಿದೆ.

ಡಿ.3ರಂದು ಅಡ್ಯಾರ್ ಕಣ್ಣೂರಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ತನ್ನ ಎರಡು ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಕಳೆದು ಕೊಂಡಿದ್ದೆ. ಈ ಬಗ್ಗೆ ಕಂಕನಾಡಿ ಠಾಣೆಗೆ ದೂರು ನೀಡಿದ್ದೆ. ಎರಡು ದಿನದ ಬಳಿಕ ಒಂದು ಮೊಬೈಲ್‌ನ ಸಿಮ್ ಆನ್ ಆಗಿತ್ತು. ಅದಕ್ಕೆ ಸಂಬಂಧಿಕರ ಪೋನ್ ಮೂಲಕ ಸಂಪರ್ಕಿಸಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್‌ನಲ್ಲಿ ಮೊಬೈಲ್ ಪೋನ್ ಸಿಕ್ಕಿದೆ. ತಾನೀಗ ಕಡಬದಲ್ಲಿದ್ದೇನೆ ಎಂದು ತಿಳಿಸಿದ್ದ. ಅಲ್ಲದೆ ನಾಲ್ಕು ದಿನ ಕಳೆದ ಮಂಗಳೂರಿಗೆ ಬಂದು ಮೊಬೈಲ್ ಕೊಡುವುದಾಗಿಯೂ ಹೇಳಿದ್ದ. ಆದರೆ ನಾಲ್ಕು ದಿನವಾದರೂ ಆತ ಮೊಬೈಲ್‌ ತಂದುಕೊಡಲಿಲ್ಲ. ಡಿ.12ರಂದು ತನ್ನ ಹಳೆಯ ನಂಬರ್‌ನ ಮೊಬೈಲ್ ಸಿಮ್‌ನ್ನು ಬ್ಲಾಕ್ ಮಾಡಿ ಹೊಸ ಸಿಮ್ ಖರೀದಿಸಿದ್ದೆ. ಅದೇ ದಿನ ತನ್ನ ಮೊಬೈಲ್‌ನ ಪೋನ್ ಪೇ ಮೂಲಕ 1.82 ಲ.ರೂ.ಗಳನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News