ಆಗ್ನೇಯ ವಲಯ ಅಂತರ್ ವಿವಿ ಫುಟ್ಬಾಲ್: ಯೆನೆಪೋಯ ವಿವಿ ತಂಡ ಚಾಂಪಿಯನ್
ಮಂಗಳೂರು, ಡಿ.16: ಆಗ್ನೇಯ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಯೆನೆಪೊಯ ವಿಶ್ವವಿದ್ಯಾನಿಯದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲ ಬಾರಿ ಯೆನೆಪೊಯ ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ , ತೆಲಂಗಾಣ ಮತ್ತು ಛತ್ತೀಸ್‌ಗಡ ರಾಜ್ಯಗಳ ಒಟ್ಟು 51 ತಂಡಗಳು ನೋಂದಾಯಿಸಿಕೊಂಡಿದ್ದವು.
ಈ ಟೂರ್ನಮೆಂಟ್‌ನಲ್ಲಿ ವಿಜಯಿಯಾದ 4 ತಂಡಗಳು ಅಖಿಲ ಭಾರತ ಮಟ್ಟದ ವಿವಿ ಪಂದ್ಯಾವಳಿಯಲ್ಲಿ ಆಡುವ ಅವಕಾಶ ಪಡೆಯಿತು.
ಅಂತಿಮ ಹಣಾಹಣಿಯಲ್ಲಿ ಯೆನೆಪೊಯ ವಿವಿ ತಂಡವು ಹೇಮಚಂದ್ ಯಾದವ್ ವಿವಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಹೇಮಚಂದ್ ಯಾದವ್ ವಿವಿ ಮೊದಲ ರನ್ನರ್ ಅಪ್, ಮಂಗಳೂರು ವಿವಿ ಎರಡನೇ ರನ್ನರ್ ಅಪ್, ಉಸ್ಮಾನಿಯಾ ವಿಶ್ವವಿದ್ಯಾನಿಲಯ ಮೂರನೇ ರನ್ನರ್ ಅಪ್ ಪ್ರಶಸ್ತಿಯನ್ನು ಹಂಚಿಕೊಂಡವು.
ಯೆನೆಪೊಯ ವಿವಿ ತಂಡದ ಕೋಚ್ ಬೇಬಿ ಥಾಮಸ್ ಮತ್ತು ತಂಡದ ಮ್ಯಾನೇಜರ್ ಸುಜಿತ್ ಕೆ ವಿ ಯೆನೆಪೊಯ ವಿವಿ ತಂಡವನ್ನು ಬಲಿಷ್ಠವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.