ಶ್ರೇಯಾ ಘೋಷಾಲ್ ಕಂಠ ಸಿರಿಗೆ ವಿರಾಸತ್ ಪ್ರೇಕ್ಷಕರು ಫಿದಾ
ಮೂಡುಬಿದಿರೆ: ಆಳ್ವಾಸ್ ವಿರಾಸತ್ ನ ಮೂರನೇ ದಿನವಾದ ಶನಿವಾರ ಮೂಡುಬಿದಿರೆಯ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಮಧುರ ಕಂಠ ಸಿರಿಯ ಮೂಲಕ ಪ್ರೇಕ್ಷಕರನ್ನೂ ಮೋಡಿ ಮಾಡಿದರು.
ಬಯಲು ರಂಗಮಂದಿರದಲ್ಲಿ ಸೇರಿದ್ದ ಸಹಸ್ರಾರು ಸಂಖ್ಯೆಯ ಪ್ರೇಕ್ಷಕರನ್ನು ಹಾಡಿನ ಜೊತೆ ಕೈ ಬೀಸುತ್ತಾ , ಮೈ ಬಳುಕಿಸು ತಾ, ಹೆಜ್ಜೆ ಹಾಕುತ್ತಾ ತಮ್ಮ ಜೊತೆ ಹಾಡುವಂತೆ ಪ್ರೋ ತ್ಸಹಿಸಿದರು.
ವೇದಿಕೆಯ ಮೇಲೆರುತ್ತಲೆ ಯಾರಾ ವೋ ಯಾ ರಾ ಹಾಡಿನ ಮೂಲಕ ಸೇರಿದ್ದ ಸಂಗೀತ ಪ್ರಿಯರನ್ನು ಸೆಳೆದರು. ಗುಲಾಬಿ ಬಣ್ಣದ ಸಲ್ವಾರ್ ಸೂಟ್ ಧರಿಸಿದ್ದ ಶ್ರೇಯಾ , ವಿರಾಸತ್ ನ ಈ ಕಾರ್ಯ ಕ್ರಮದಲ್ಲಿ ಭಾಗವಹಿಸಲು ಖುಷಿ ಆಗುತ್ತಿದೆ. ನನ್ನ ಜೀವನದ ಬಹಳ ದೊಡ್ಡ ಕಾನ್ಸರ್ಟ್ ಇದಾಗಿದೆ. ನಾನು ಹೃದಯದಿಂದ ಹಾಡುತ್ತೇನೆ. ನನ್ನ ಜೊತೆ ಹಾಡಿ ಎಂದು ಹೇಳುತ್ತ ಸಭಿಕರನ್ನು ಹುರಿದುಂಬಿಸಿದರು.
ಪ್ರೇಕ್ಷಕರ ಗುಂಪಿನಲ್ಲಿ 'i love you Shreya' ಫಲಕ ಪ್ರದರ್ಶನಗೊಂಡರೆ, ಏಕಕಾಲದಲ್ಲಿ ಪ್ರೇಕ್ಷಕರು ಮೊಬೈಲ್ ಟಾರ್ಚ್ ಬೆಳಕಿನ ಮೂಲಕ ತಮ್ಮ ಅಭಿಮಾನವನ್ನು ತೋರ್ಪಡಿಸಿದರು.
ಕನ್ನಡ ಹಾಡುಗಳಿಗೂ ದನಿಯಾದ ಶ್ರೇಯಾ 'ಸಾಲು ತಿಲ್ಲವೆ, ಸಾಲು ತಿಲ್ಲವೆ, ನಿನ್ನ ಹಾಗೆ ಬೇರೆ ಇಲ್ಲವೇ ', ಗಗನವೇ , ನಿನ್ನ ನೋಡಿ ಸುಮ್ಮಗಿರಲಿ ಮೊದಲಾದ ಕನ್ನಡ ಹಾಡುಗಳಿಗೂ ದನಿಯಾದರು.
ಹಾಡುಗಳ ಮಧ್ಯೆ ಮಧ್ಯೆ ವಿರಾಸತ್ ಬಗ್ಗೆ ಮಾತನಾಡಿದ ಶ್ರೇಯಾ , ಆಳ್ವಾಸ್ ಸಂಸ್ಥೆ ಪ್ರವೇಶಿಸುತ್ತಿದ್ದಂತೆ ದೇಶದ ಸಂಸ್ಕತಿ ಅನಾವರಣ ಗೊಂದಂತಾಯಿತು. ನಾನು ಭಾರತೀಯಲು ಎಂದು ಹೇಳಲು ಹೆಮ್ಮೆ ಆಗುತ್ತಿದೆ. ನಮ್ಮ ಪರಂಪರೆ, ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಇಂಥ ಕಾರ್ಯಕ್ರಮ ನಾನು ಎಲ್ಲೂ ಕಂಡಿಲ್ಲ ಎಂದರು.
ಇಲ್ಲಿ ತುಂಬಾ ಸೆಖೆ ಇದೆ!
ಇಲ್ಲಿ ತುಂಬಾ ಸೆಖೆ ಇದೆ, ಹೌದಲ್ವಾ ಎಂದು ಹೇಳುತ್ತಾ ಮಳೆ ಹಾಡು ಜೊತೆಯಾಗಿ ಹಾಡೋಣ ಎನ್ನುತ್ತಾ, ಬರ್ ಸೋರೆ ಮೇಘ ಬರ್ ಸೋರೆ ಹಾಡು ಹಾಡಿದರು.
ಮೆ ದೀವಾನಿ ಹೋಗಯಿ, ಬೇರಂಗಿ, ಮನ್ ವಾ ಲಾಗೆ, ದಿಲ್ ಕೋಗಾಯ ಕಿಸಿಕಾ , ಅಗರ್ ತುಮ್ ಮಿಲ್ ಜವೋ, ಧೋಲ್ ಭಾಜೆ ಮೊದಲಾದ ಸೂಪರ್ ಹಿಟ್ ಬಾಲಿವುಡ್ ಹಾಡುಗಳ ಮೂಲಕ ಮನ ರಂಜಿಸಿದರು.
ಗಾಯಕ ಕಿಂಜಲ್ ಚಟರ್ಜಿ ಅವ್ರೂ ಕೆಲ ಹಾಡುಗಳಿಗೆ ತಮ್ಮ ಕಂಠ ಸಿರಿಯ ಮೂಲಕ ಶ್ರೇಯಾ ಅವರಿಗೆ ಸಾಥ್ ನೀಡಿದರು.
ಕಾರ್ಯಕ್ರಮದ ನಡುವೆ, ಶ್ರೇಯಾ ಅವರಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು ಸ್ಮರಣಿಕೆ ನೀಡಿ ಗೌರವಿಸಿದರು.