ಸಹ್ಯಾದ್ರಿ ಸೆಂಟರ್ ಫಾರ್ ಫ್ಯೂಚರ್ ಲೀಡರ್ಸ್ ಉದ್ಘಾಟನೆ
Update: 2023-12-16 22:27 IST
ಮಂಗಳೂರು : ಸಹ್ಯಾದ್ರಿ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಸಹ್ಯಾದ್ರಿ ಸೆಂಟರ್ ಫಾರ್ ಫ್ಯೂಚರ್ ಲೀಡರ್ಸ್ (ಎಸ್‌ಸಿಎಫ್‌ಎಲ್ ) ಶನಿವಾರ ಉದ್ಘಾಟನೆಗೊಂಡಿತು.
ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನೂತನ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತ ನಾಡಿದ ಅವರು ಸಹ್ಯಾದ್ರಿ ಸಂಸ್ಥೆಯಲ್ಲಿ ಭವಿಷ್ಯದ ನಾಯಕರನ್ನು ರೂಪಿಸುವ ನಿಟ್ಟಿನಲ್ಲಿ ಆರಂಭಿಸಲಾದ ಕೇಂದ್ರವು ಉತ್ತಮ ಯಶಸ್ಸು ಸಾಧಿಸಲಿದ್ದು, ಭವಿಷ್ಯದ ಉತ್ತಮ ನಾಯಕರನ್ನು ರೂಪಿಸಲಿದೆ ಎಂದು ಹೇಳಿದರು.
ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಅಧ್ಯಕ್ಷ ಡಾ. ಮಂಜುನಾಥ ಭಂಡಾರಿ ಉಪಸ್ಥಿತರಿ ದ್ದರು. ಇದೇ ಸಂದರ್ಭ ಸಚಿವರೊಂದಿಗೆ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳ ಸಂವಾದ ನಡೆಯಿತು.