×
Ad

ಸುಳ್ಯ: ನೇಣು ಬಿಗಿದ ಸ್ಥಿತಿಯಲ್ಲಿ ಅಯ್ಯಪ್ಪ ವೃತದಾರಿಯ ಮೃತದೇಹ ಪತ್ತೆ; ಪ್ರಕರಣ ದಾಖಲು

Update: 2023-12-21 21:39 IST

ಸುಳ್ಯ: ಸೇವಾಜೆ ಎಂಬಲ್ಲಿ ಅಯ್ಯಪ್ಪ ಮಾಲಾ ವೃತಧಾರಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ದೇವಚಳ್ಳ ಗ್ರಾಮದ ದೇವ ಎಂಬಲ್ಲಿಯ ದಿ. ಹೊನ್ನಪ್ಪ ಎಂಬವರ ಪುತ್ರ ಪದ್ಮನಾಭ (26) ಮೃತ ವ್ಯಕ್ತಿ. ಸೇವಾಜೆ ಬಳಿಯ ಆಶ್ರಮದಲ್ಲಿ ಅಯ್ಯಪ್ಪ ಮಾಲೆ ಧರಿಸಿ ವೃತ್ತಚಾರಣೆಯಲ್ಲಿದ್ದರು. ಆಶ್ರಮದಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೃತದೇಹದ ತೊಡೆಯ ಭಾಗದಲ್ಲಿ ರಕ್ತ ಸೋರಿಕೆಯಾಗುತ್ತಿದ್ದದು ಕಂಡು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ತಾಯಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News