ಉಪ್ಪಿನಂಗಡಿ: ಲಾರಿ - ರಿಕ್ಷಾ ಅಪಘಾತ; ಮೂವರಿಗೆ ಗಾಯ
Update: 2023-12-21 21:42 IST
ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ನದಿಯ ಸೇತುವೆಯಲ್ಲಿ ಅಟೋ ರಿಕ್ಷಾ ಹಾಗು ಲಾರಿಯ ನಡುವೆ ಡಿಕ್ಕಿ ಸಂಭವಿಸಿ ಅಟೋ ರಿಕ್ಷಾದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಪೆರ್ನೆಯ ಫ್ರಾಂಕ್ಲಿನ್ ಗ್ಲನ್ ಲೋಬೋ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋ ರಿಕ್ಷಾಕ್ಕೆ ಲಾರಿಯೊಂದು ಢಿಕ್ಕಿ ಹೊಡೆದಿದ್ದು, ಚಾಲಕ ಫ್ರಾಂಕ್ಲಿನ್ ಗ್ಲನ್ ಲೋಬೋ (23) ಅವರ ಕಾಲು ತುಂಡರಿಸಲ್ಪಟ್ಟಿದೆ. ರಿಕ್ಷಾದಲ್ಲಿ ಪ್ರಯಾಣಿಕರಾದ ಉತ್ತರ ಭಾರತ ಮೂಲದ ಅಜಯ್ ಖಾರ್ವಾಲ್ (17), ಪೂರನ್ ಸಿಂಗ್ ಖಾರ್ವಾಲ್ (29) ಎಂಬವರೂ ಗಂಭೀರ ಗಾಯಗೊಂಡಿದ್ದಾರೆ. ಇವರು ಪೆರ್ನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.
ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.