×
Ad

ಇಸ್ಪೀಟ್‌ ಆಡುತ್ತಿದ್ದ ಆರೋಪ: ನಾಲ್ಕು ಮಂದಿ ಸೆರೆ

Update: 2023-12-21 22:12 IST

ಸುರತ್ಕಲ್ : ಹಣ ಪಣವಾಗಿಟ್ಟು ಅಂದರ್‌ ಬಾಹರ್‌ ಇಸ್ಪೀಟ್‌ ಆಡುತ್ತಿದ್ದ 4 ಮಂದಿಯನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸ್ಥಳೀಯರಾದ ನಿಂಗಪ್ಪ ಪಾಟೀಲ್, ಶರಣಪ್ಪ ಗುಳಬಾಳ, ಸುನೀಲ್, ಸಕ್ರಪ್ಪ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಿಂದ ಆಟಕ್ಕೆ ಬಳಸಿದ್ದ 4 ಮೊಬೈಲ್‌ ಫೋನ್‌ಗಳು, 1980 ರೂ. ನಗದು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗಿದೆ ಎಂದು ಸುರತ್ಕಲ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News