ಮೆಹೆಂದಿ ಕಾರ್ಯಕ್ರಮದಲ್ಲಿ ಕರ್ಕಶ ಡಿಜೆ: ಪ್ರಕರಣ ದಾಖಲು
Update: 2023-12-22 22:07 IST
ಉಡುಪಿ, ಡಿ.22: ಅಂಬಲಪಾಡಿ ಗ್ರಾಮದ ಪ್ರಜ್ವಲ್ ನಗರದಲ್ಲಿ ಡಿ.20 ರಂದು ತಡರಾತ್ರಿ ನಡೆದ ಮೆಹೆಂದಿ ಕಾರ್ಯಕ್ರಮ ದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಡಿಜೆ ಸಂಗೀತ ಹಾಕಿ ಸಾರ್ವಜನಿಕರಿಗೆ ತೊಂದು ಮಾಡುತ್ತಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಪ್ರಿತೇಶ್ ಯಾವುದೇ ಪೂರ್ವಾನುಮತಿ ಪಡೆಯದೆ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮ ದಲ್ಲಿ ಡಿಜೆ ಹಾಕಿ ಕರ್ಕಶವಾಗಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದರೆನ್ನಲಾಗಿದೆ. ಈ ಹಿನ್ನೆಲೆ ಯಲ್ಲಿ ಪೊಲೀಸರು ಧ್ವನಿವರ್ಧಕದ ಮಾಲಕ ಶರತ್ ಹಾಗೂ ಲೈಟ್ಸ್- ಸೌಂಡ್ಸ್‌ನ ಸಿಬ್ಬಂದಿ ದಿಲೀಪ್, ರಂಜಿತ್ ಮತ್ತು ಯತೀನ್ ಪೂಜಾರಿ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.