ದ.ಕ. ಜಿಲ್ಲೆ: ಕೋವಿಡ್‌ಗೆ ಓರ್ವ ಬಲಿ
Update: 2023-12-22 22:25 IST
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ 40 ವರ್ಷ ಪ್ರಾಯದ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಲಸೆ ಕಾರ್ಮಿಕರಾಗಿದ್ದ ಇವರಿಗೆ ಮಧುಮೇಹ ಕಾಯಿಲೆಯೂ ಇದ್ದು, ಮದ್ಯವ್ಯಸನಿ ಕೂಡ ಆಗಿದ್ದರು ಎನ್ನಲಾಗಿದೆ.
ಸದ್ಯ ಜಿಲ್ಲೆಯಲ್ಲಿ ಎರಡು ಸಕ್ರಿಯ ಕೋವಿಡ್ ಪ್ರಕರಣಗಳು ಇವೆ. ಶುಕ್ರವಾರ ಆರು ಮಂದಿಯನ್ನು ಕೋವಿಡ್ ತಪಾಸಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.