×
Ad

ಸ್ಟೋರ್ ಮ್ಯಾನೇಜರ್ ನಾಪತ್ತೆ

Update: 2023-12-23 22:25 IST

ಮಂಗಳೂರು: ನಗರದ ಮಾಲ್‌ವೊಂದರಲ್ಲಿ ಸ್ಟೋರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸುವಿ ಪಿ.ಎಂ.(49) ಎಂಬ ವರು ನಾಪತ್ತೆಯಾಗಿರುವ ಬಗ್ಗೆ ಕದ್ರಿ ಠಾಣೆಗೆ ದೂರು ನೀಡಲಾಗಿದೆ.

ಡಿ.13ರಂದು ರಾತ್ರಿ ಕೆಲಸದ ನಿಮಿತ್ತ ಕರಂಗಲ್ಪಾಡಿಯ ತನ್ನ ಮನೆಯಿಂದ ಬೆಂಗಳೂರಿಗೆ ತೆರಳಿದ್ದರು. ಡಿ.14ರಂದು ಬೆಳಗ್ಗೆ 7:35ಕ್ಕೆ ಪತ್ನಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವುದಾಗಿ ತಿಳಿಸಿದ್ದರು. ಆ ದಿನ ಬೆಳಗ್ಗೆ 10:30ಕ್ಕೆ ಮಾಲ್‌ನವರು ಕರೆ ಮಾಡಿ ಸುವಿ ಕೆಲಸಕ್ಕೆ ಬಾರದೆ ಗೈರು ಹಾಜರಾಗಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಬಳಿಕ ತಾನು ಹಲವು ಬಾರಿ ಕರೆ ಮಾಡಿದಾಗಲೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ ಎಂದು ಸುವಿ ಅವರ ಪತ್ನಿ ಕದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News