ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ: ಕಾರ್ಯಕರ್ತರ ಸಭೆ
ಸುರತ್ಕಲ್, ಡಿ. 23: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ ಚಿತ್ರಾಪುರ ಇವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ವಿಶ್ವಕರ್ಮ ಸಭಾ ಭವನದಲ್ಲಿ ಶನಿವಾರ ರಾತ್ರಿ ಜರುಗಿತು.
ಈ ಸಂದರ್ಭ ಮಾತನಾಡಿದ ಇನಾಯತ್ ಅಲಿ, ನಮ್ಮ ನಾಯಕರನ್ನು ಸಾರ್ವಜನಿಕ ಸ್ಥಳಗಳಲ್ಲಿ ಹೀನಾಯಮಾನವಾಗಿ ನಿಂದಿಸಿದ್ದ ನಾಯಕರೊಬ್ಬರು ಮತ್ತೆ ಪಕ್ಷ ಸೇರ್ಪಡೆಗೆ ಮಸಲತ್ತು ನಡೆಸುತ್ತಿರುವುದು ತಿಳಿದು ಬಂದಿದೆ. ಪಕ್ಷ ಎಲ್ಲಾ ಸವಲತ್ತುಗಳನ್ನು ನೀಡಿ ಶಾಸಕನಾಗಿ ಮಾಡಿರುವ ಪಕ್ಷವನ್ನೇ ದಿಕ್ಕರಿಸಿ ನಮ್ಮ ನಾಯಕರನ್ನು ಹಿನಾಯಮಾನವಾಗಿ ಹಂಗಿಸುತ್ತಿದ್ದ ವ್ಯಕ್ತಿಯನ್ನು ಯಾವುದೇ ಕಾಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ಸದ್ಯ ಮುಂದಿನ ಚುನಾವಣೆಯಲ್ಲಿ ಅತೀ ಹೆಚ್ಚಿನ ಬಹುಮತ ಸ್ಥಾಪಿಸಲು ನಾವು ನಿರ್ವಾರ್ಥರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕಿದೆ. ಬೂತ್ ಗಳು ನಮ್ಮ ಬೆನ್ನೆಲುಬುಗಳು ಅವುಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಪಕ್ಷ ಕಾರ್ಯಪ್ರವೃತ್ತವಾಗಿದ್ದು, ಹಚ್ಚಿನ ಶ್ರಮ ವಹಿಸಲಾಗುತ್ತಿದೆ ಎಂದದರು.
ಇದೇ ಸಂದರ್ಭ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀನಿವಾಸ ಸಾಲಿಯಾನ್, ಕೆನರಾ ಯೂತ್ ಕೌನ್ಸಿಲ್ ತಂಡ ಮತ್ತು ಮಿಸ್ಸಸ್ ಕರ್ನಾಟಕ ಪುರಸ್ಕೃತ ಸೌಮ್ಯ ಲತಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೆಪಿಸಿಸಿ ಸದಸ್ಯರಾಗಿ ಆಯ್ಕೆಯಾದ ಸದಾಶಿವ ಶೆಟ್ಟಿ, ವೆನ್ಲಾಕ್ ರಕ್ಷಾ ಸಮಿತಿಗೆ ಆಯ್ಕೆಯಾದ ಪದ್ಮನಾಭ ಅಮೀನ್, ಪ್ರಮಿಳಾ ಅವರನ್ನು ಅಭಿನಂಧಿಸಲಾಯಿತು. ಇದೇ ಸಂದರ್ಭ ಇನಾಯತ್ ಅಲಿ ಅವರ ಹುಟ್ಟು ಹಬ್ಬದವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಸಭೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಶುಭೋದಯ ಆಳ್ವ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಶೆಟ್ಟಿ, ಮಾಜಿ ಮಹಾ ಪೌರರಾದ ಗುಲ್ಜಾರ್ ಬಾನು, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಶಶಿಕಲಾ ಪದ್ಮನಾಭ, ಮಲ್ಲಿಕಾರ್ಜುನ, ಮುಹಮ್ಮದ್ ಶಮೀರ್, ರಾಜೇಶ್ ಪಡ್ರೆ, ಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪಧಾಧಿಕಾರಿಗಳು, ಪಕ್ಷದ ನಾಯಕರು, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮಾಜಿ ಮ.ನ.ಪಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.
"ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ನನ್ನ ನಿವಾಸಕ್ಕೂ ಕಾರ್ಯಕರ್ತಯರು ಭೇಟಿಯಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬಹುದು. ಸ್ವೀಕರಿಸಲು ಸಾಧ್ಯವಿರುವಂತಹಾ ಸಲಹೆ ಸೂಚನೆಗಳನ್ನು ಸ್ವೀಕರಿಸಿಕೊಂಡು ಕಾರ್ಯ ರೂಪಕ್ಕೆ ತರಲು ಶ್ರಮಿಸಲಾಗುವುದು".
-ಇನಾಯತ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ