×
Ad

ಶಿರ್ಲಾಲು ಸೂಡಿ ಬಸದಿ ಪಂಚಕಲ್ಯಾಣದ ಶ್ರೀಮುಖ ಪತ್ರಿಕೆ ಬಿಡುಗಡೆ

Update: 2023-12-27 22:09 IST

ಕಾರ್ಕಳ : ತಾಲೂಕಿನ ಇತಿಹಾಸ ಪ್ರಸಿದ್ಧ ಶಿರ್ಲಾಲು ಸೂಡಿ ಭಗವಾನ್ ಶ್ರೀ ಆಧಿನಾಥ ಸ್ವಾಮಿ ಬಸದಿಯ ಪಂಚ ಕಲ್ಯಾಣ ಕಾರ್ಯಕ್ರಮ ಜನವರಿ 28ರಿಂದ ಫೆಬ್ರವರಿ 1ರವರೆಗೆ  ನಡೆಯಲಿದ್ದು,  ಬಸದಿ ಪಂಚಕಲ್ಯಾಣದ ಶ್ರೀಮುಖ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಕಾರ್ಕಳ‌ ದಾನಶಾಲಾ ಜೈನ ಮಠದ ಧ್ಯಾನಯೋಗಿ ಸ್ವಸ್ಥಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಜಂಟಿ ಬಿಡುಗಡೆಗೊಳಿಸಿದರು

ಈ ಸಂಧರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ, ಎಸ್ ಸಿ ಸಿ ಡಿ ಎಸ್ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್, ಅಧ್ಯಕ್ಷ ಗುಣಪಾಲ್ ಕಡಂಬ, ಕಾರ್ಯಾಧ್ಯಕ್ಷ ಶಾಂತಿರಾಜ್ ಜೈನ್, ಕಾರ್ಯದರ್ಶಿ ಸೂರಜ್ ಜೈನ್ ಕೋಶಾಧಿಕಾರಿ ಮಹಾವೀರ್ ಜೈನ್, ನ್ಯಾಯವಾದಿ ಎಂ ಕೆ ವಿಜಯಕುಮಾರ್, ಶೀತಲ್ ಜೈನ್ ಶಿರ್ಲಾಲು ಹಾಗೂ ಶ್ರಾವಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News