×
Ad

ನವ ವಿವಾಹಿತ ಆತ್ಮಹತ್ಯೆ

Update: 2023-12-30 21:55 IST

ಮಂಗಳೂರು : ನವ ವಿವಾಹಿತ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಲೆಟ್ಟಿ ಗ್ರಾಮದ ಗುಂಡ್ಯದಲ್ಲಿ ಶನಿವಾರ ನಡೆದಿದೆ.

ಆಲೆಟ್ಟಿಯ ಗುಂಡ್ಯ ನಿವಾಸಿ ದಿ.ಕೊರಗಪ್ಪ ಎಂಬವರ ಪುತ್ರ ರಾಜೇಶ್ ಗುಂಡ್ಯ( 29) ರವರು ಶನಿವಾರ ಬೆಳಗ್ಗೆ ತನ್ನ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಜೇಶ್ ಅವರಿಗೆ ಡಿ.21 ರಂದು ಕಾಣಿಯೂರಿನ ಯುವತಿ ಜೊತೆ ವಿವಾಹವಾಗಿತ್ತು. ಬಳಿಕ ತನ್ನ ಪತ್ನಿಯೊಂದಿಗೆ ಗುಂಡ್ಯ ಮನೆಯಲ್ಲಿದ್ದರು. ಶನಿವಾರ ಬೆಳಗ್ಗೆ ಮನೆಯವರು ಹೊರಗಡೆ ಹೋದ ಬಳಿಕ ಸೀರೆಯನ್ನು ಬಳಸಿ ಆತ್ಮಹತ್ಯೆಗೆ ಶರಣಾಗಿ ದ್ದಾರೆ. ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News