ಸಾರ್ವಜನಿಕ ಕೊಳವೆ ಬಾವಿ ಹಸ್ತಾಂತರ
Update: 2023-12-31 20:28 IST
ಮಂಗಳೂರು: ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಸಮಾಜ ಸೇವಾ ವಿಭಾಗ ಮತ್ತು ಅಂಬ್ಲಮೊಗರು ಗ್ರಾಪಂ ಸಹಭಾಗಿತ್ವದಲ್ಲಿ ದಾನಿಯೋರ್ವರ ಸಹಕಾರದಿಂದ ತಿಲಕ್‌ನಗರದಲ್ಲಿ ನಿರ್ಮಿಸಲಾದ ಕೊಳವೆ ಬಾವಿಯನ್ನು ಶನಿವಾರ ಉದ್ಘಾಟಿಸಿ ಗ್ರಾಪಂ ಹಸ್ತಾಂತರಿಸಲಾಯಿತು.
ಕೊಳವೆ ಬಾವಿಯನ್ನು ಕೊಡುಗೆಯಾಗಿ ನೀಡಿದ ಉಳ್ಳಾಲ ಮಾಸ್ತಿಕಟ್ಟೆಯ ದಿ. ಅಡ್ವಕೇಟ್ ಯು.ಎನ್. ಅಹ್ಮದ್‌ರ ಪತ್ನಿ ಸಫಿಯ ಬಾನು ಉದ್ಘಾಟಿಸಿದರು. ಅತಿಥಿಗಳಾಗಿ ಪಿ.ಎ. ಫಾರ್ಮಸಿ ಕಾಲೇಜಿನ ಪ್ರೊ. ಡಾ. ಮುಹಮ್ಮದ್ ಮುಬೀನ್, ಅಂಬ್ಲಮೊಗರು ಗ್ರಾಪಂ ಅಧ್ಯಕ್ಷ ಇಕ್ಬಾಲ್, ಪಿಡಿಒ ಅಬ್ದುಲ್ ಖಾದರ್, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಝೀನತ್ ಹಸನ್ ಮಾತನಾಡಿದರು.
ವಿದ್ಯಾರ್ಥಿನಿ ರಾಫಿಯ ತಸ್ಲೀಮಾ ಕಿರಾಅತ್ ಪಠಿಸಿದರು. ಸಮಾಜ ಸೇವಾ ವಿಭಾಗದ ಸಂಚಾಲಕ ಇಸ್ಹಾಕ್ ಕಲ್ಲಾಪು ಸ್ವಾಗತಿಸಿದರು. ಅಬ್ದುರ‌್ರವೂಫ್ ಕಾರ್ಯಕ್ರಮ ನಿರೂಪಿಸಿದರು.