ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
Update: 2023-12-31 20:44 IST
ಉಳ್ಳಾಲ: ಇಲ್ಲಿನ ಸಮುದ್ರದ ಬೀಚ್‌ನಲ್ಲಿ ಮುಳುಗಿ ಮೃತಪಟ್ಟ ಬಶೀರ್ (23) ಎಂಬವರ ಮೃತದೇಹ ಪತ್ತೆಯಾಗಿದೆ.
ಉಳ್ಳಾಲ ದರ್ಗಾ ಝಿಯಾರತ್‌ಗೆಂದು ಬಂದಿದ್ದ ಚಿಕ್ಕ ಮಗಳೂರು ಅಯ್ಯಪ್ಪನಗರ ಮೂಲದ ಕುಟುಂಬ ಸಮ್ಮರ್ ಸ್ಯಾಂಡ್ ಬೀಚ್ ಗೆ ತೆರಳಿದ್ದು, ಈ ವೇಳೆ ಮೂವರು ಸಮುದ್ರದ ಅಲೆಗೆ ಸಿಲುಕಿದ್ದರು. ಈ ಪೈಕಿ ಸೈಫ್ ಅಲಿ ಯನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದರು. ಇವರಲ್ಲಿ ಸಲ್ಮಾನ್ ಮೃತಪಟ್ಟಿದ್ದರು. ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ ಬಶೀರ್ ಅವರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.