×
Ad

ತಾಜುಲ್ ಉಲಮಾ ಅನುಸ್ಮರಣೆ, ಸುನ್ನೀ ಸೆಂಟರ್ ವಾರ್ಷಿಕೋತ್ಸವ

Update: 2024-01-06 22:09 IST

ವಿಟ್ಲ: ತಾಜುಲ್ ಉಲಮಾ ಸುನ್ನೀ ಸೆಂಟರ್ ಎನ್.ಸಿ ರೋಡ್ ವತಿಯಿಂದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಮತ್ತು ತಾಜುಲ್ ಉಲಮಾ ಸುನ್ನೀ ಸೆಂಟರ್ ಇದರ 10ನೇ ವಾರ್ಷಿಕ ಸಮ್ಮೇಳನ ಬೋಳಂತೂರು ಗ್ರಾಮದ ಎನ್.ಸಿ ರೋಡಲ್ಲಿ ಶೈಖುನಾ ಮಂಚಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಸ್ಸಯ್ಯಿದ್ ಮುಖ್ತಾರ್ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ಒಕ್ಕೆತ್ತೂರು ನೂರುಲ್ ಹುದಾ ದರ್ಸ್ ವಿದ್ಯಾರ್ಥಿಗಳಿಂದ ತಾಜುಲ್ ಉಲಮಾ ಮೌಲಿದ್ ಕಾರ್ಯಕ್ರಮ ನಡೆಯಿತು.

ಅಸ್ಸಯ್ಯಿದ್ ನೂರುಸ್ಸಾದತ್ ಬಾಯರ್ ತಂಙಳ್ ರವರು ದುಹಾ ಆಶೀರ್ವಚನೆ ಮಾಡಿದರು. ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅನುಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ದಾರುಲ್ ಅಶ್-ಅರಿಯ್ಯ ಸಂಸ್ಥೆಯ ಮ್ಯಾನೆಜರ್ ಮಹಮ್ಮದ್ ಅಲಿ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಉಸ್ಮಾನ್ ಜೌಹರಿ ನೆಲ್ಯಾಡಿ ಮುಖ್ಯ ಪ್ರಭಾಷಣ ಮಾಡಿದರು. 

ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಾಕುಬ್ ದಂಡೆಮಾರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಯಾಕುಬ್ ದಂಡೆಮಾರ್, ಪಂಚಾಯತ್ ಸದಸ್ಯರಾದ ಅಶ್ರಫ್ ಸೆಡ್, ಅನ್ಸಾರ್ ಬಿ.ಜಿ, ಹಮೀದ್ ಮದನಿ ನಾರ್ಶ, ಮಹಮೋದ್ ಸಹದಿ, ಶರೀಫ್ ಸಹದಿ, ಇಬ್ರಾಹಿಂ ಖಲೀಲ್ ಮಾಲಿಕಿ, ಡಿ ಎನ್ ಹಮೀದ್ ಮದನಿ, ಎನ್ ಡಿ ಅಬೂಬಕ್ಕರ್ ಮದನಿ, ರಜಾಕ್ ಭಾರತ್, ಉಮ್ಮರ್ ಸಖಾಫಿ ಸೆರ್ಕಳ, ಅಶ್ರಫ್ ಮುಸ್ಲಿಯಾರ್, ಇಬ್ರಾಹಿಂ ಸಖಾಫಿ ಸೆರ್ಕಳ, ಇಬ್ರಾಹಿಂ ಖಂಡಿಗ, ಸಿದ್ದೀಕ್ ಸಹದಿ, ಹಂಝ ಮಂಚಿ, ಆಸ್ಲಾಂ ಸಂಪಿಲ, ಆಶ್ರಫ್ ಬಂಡಶಾಲೆ, ದಾವೂದ್ ಕಲ್ಲಡ್ಕ, ಅಕ್ಬರ್ ಅಲಿ ಮದನಿ, ಅಬ್ಬಾಸ್ ಮುಸ್ಲಿಯರ್, ಅಬ್ದುಲ್ಲ ನಾರಂಕೋಡಿ, ಹೈದರ್ ಕುಡುಂಬಕೊಡಿ, ಉಮರಬ್ಬ ಶಾಮಿಯಾನ, ಹಮಿದ್ ಕುಲ್ಲಿಯಾರ್, ಹಮೀದ್ ಉಸ್ತಾದ್ ಅಂಗಡಿ, ಬಿ ಎಂ ಅಬ್ದುಲ್ ಖಾದರ್ ಮುಸ್ಲಿಯರ್ , ಫಾರೂಕ್ ಬಿಜಿ, ಯಾಕುಬ್ ನಾರ್ಶ, ರಫೀಕ್ ಮಾಡದಬಳಿ, ಶರೀಫ್ ಕೆ.ಎನ್ , ರಹೀಂ ಕುಡುಂಬ ಕೋಡಿ, ಕಬೀರ್ ಖಂಡಿಗ, ಅಬ್ದುಲ್ ರಹಮಾನ್ ಟವರ್, ಇಬ್ರಾಹಿಂ ಟಿ, ಇಕ್ಬಾಲ್ ಸಿಂಗಾರಿ, ಖಾದರ್ ಕೆ.ಪಿ, ಉಲಮಾ, ಉಮರಾಗಳು ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News