ಸೂರಿಂಜೆ: ದಫ್ ರಾತೀಬ್, ವಾರ್ಷಿಕ ಸ್ವಲಾತ್ ಉದ್ಘಾಟನೆ
Update: 2024-01-15 22:49 IST
ಸುರತ್ಕಲ್ : ಮುಹಿಯುದ್ದಿನ್ ಜುಮಾ ಮಸೀದಿಯ ವತಿಯಿಂದ ಕಥಾ ಪ್ರಸಂಗ, ವಾರ್ಷಿಕ ಸ್ಚಲಾತ್ ಮಜ್ಲಿಸ್, ದಫ್ ರಾತೀಬ್ ಮತ್ತು ದಫ್ ಸ್ಪರ್ಧೆ ಕಾರ್ಯಕ್ರಮ ಸೋಮವಾರ ಜುಮಾ ಮಸೀದಿಯ ವಠಾರದಲ್ಲಿ ಉದ್ಘಾಟನೆಗೊಂಡಿತು.
ಸಮಾರಂಭವನ್ನು ಮುಹಿಯುದ್ದಿನ್ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಫೈಝಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಮಾಅತ್ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಎ.ಜಲೀಲ್ ವಹಿಸಿದ್ದರು.
ಸಮಾರಂಭದಲ್ಲಿ ಮುಹಿಯುದ್ದಿನ್ ಜುಮಾ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಇಲ್ಯಾಸ್, ಕೊಶಾಧಿಕಾರಿ ಬಿ. ಹಾಜಬ್ಬ, ಎಸ್ಎಂ ಐಯ್ಯೂಬ್, ರಿಯಾಝ್ ಕಲ್ಲಕೋಟೆ, ಯಾಕೂಬ್ ಮಿಲಾನ್, ಮುಝಮ್ಮಿಲ್ ಯಮಾನಿ, ಅಬೂಸ್ವಾಲಿಹ್ ಮದನಿ ಮೊದಲಾದವರು ಉಪಸ್ಥಿತರಿದ್ದರು. ಟಿ. ಇಸ್ಮಾಯೀಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ಬಳಿಕ ಅಲ್ ಹಾಜಿ ಕೆ.ಸಿ.ಎ. ಕುಟ್ಟಿ ಕೂಡುವಳ್ಳಿ ಮತ್ತು ಸಂಗಡಿಗರಿಂದ " ಆಸ್ತಾನ ತೊರೆದ ಸುಲ್ತಾನ" ಕಥಾ ಪ್ರಸಂಗ ನಡೆಯಿತು.