ಕಾಪು ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆ
ಕಾಪು : ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಾಪು ತಾಲೂಕು ತಹಶಿಲ್ದಾರ್ ಅಧ್ಯಕ್ಷತೆಯಲ್ಲಿ ಕಾಪು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ತಾಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಹಿತರಕ್ಷಣಾ ಹಾಗೂ ಕುಂದುಕೊರತೆ ಸಭೆಯಲ್ಲಿ ಕಣ್ಣೀರಿಟ್ಟು ತನ್ನ ಸಮಸ್ಯೆಯ ಬಗ್ಗೆ ಕಣ್ಣೀರಿಡುತ್ತಾ ಹೇಳಿದಾಗ ತಹಶೀಲ್ದಾರ್ ಡಾ ಪ್ರತಿಭಾ, ಧೈರ್ಯ ತುಂಬಿ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಆದೇಶಿಸಿದರು.
ಉಚ್ಚಿಲ ಬಡಾ ಗ್ರಾಮ ಪಂಚಾತ್ ವ್ಯಾಪ್ತಿಯ ಪರಿಶಿಷ್ಟ ಪಂಗಡದ ಪದವೀದಯಾಗಿದ್ದು, ನಿರುದ್ಯೋಗಿ ಸುಪ್ರಿತಾ, ಮೇಡಮ್ ನಮ್ಮ ಮನೆಗೆ ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ವ್ಯವಸ್ಥೆ ಇಲ್ಲ. ನೀರಿನ ಸೌಲಭ್ಯವೂ ಇಲ್ಲ. ಹಿಂದೆ ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ದೀಪದ ವ್ಯವಸ್ಥೆ ಆಗಿತ್ತು. ಕೆಲವು ವರ್ಷದ ಹಿಂದೆ ಮಳೆಗಾಳಿಗೆ ಮರಗಳು ಉರುಳಿ ಲೈನ್ ಕಟ್ಟಾಗಿದೆ. ಅನಂತರ ವಿದ್ಯುತ್ ಸಂಪರ್ಕ ಹಾಕಲು ತೊಂದರೆ ಕೊಡುತ್ತಿದ್ದಾರೆ. ನೀರಿನ ನಳ್ಳಿಯೂ ಬಂದಿಲ್ಲ. ದಯವಿಟ್ಟು ನಮ್ಮ ಮನೆಗೂ ವಿದ್ಯುತ್ ಮತ್ತು ನೀರು ದೊರಕಿಸಿಕೊಡಿ ಎಂದು ಕಣ್ಣೀರಿಡುತ್ತಾ ತಮ್ಮ ಕಷ್ಟ ಹೇಳಿಕೊಂಡರು.
ಸಮಸ್ಯೆಗಳು ಹಲವಾರು: ಹಲವು ಗ್ರಾಮ ಪಂಚಾಯಿತಿ ಆಡಳಿತ ಮತ್ತು ಪಿಡಿಒಗಳು ದಲಿತರನ್ನು ನಿರ್ಲಕ್ಷ ಮಾಡುತ್ತಿ ದ್ದಾರೆ. ಒಂದು ಒಂದೂವರೆ ಸೆನ್ಸ್‍ಗೆ ಮಾತ್ರ ಹಕ್ಕುಪತ್ರ ನೀಡಿರುವುದರಿಂದ ಮನೆಕಟ್ಟಲು ಸಾಲ ಸಿಗುತ್ತಿಲ್ಲ, ದಲಿತ ಸಂಘರ್ಷ ಸಮಿತಿಗೆ 32 ವರ್ಷ ಕಳೆದರೂ ಅನುದಾನ ಸಿಗುತ್ತಿಲ್ಲ. ಉಚ್ಚಿಲ ಬೆಳಪು ಭಾಗದಲ್ಲಿ ಸ್ಮಶಾನದ ವ್ಯವಸ್ಥೆಯಿಲ್ಲ. ಕುಡಿಯುವ ನೀರಿಗೆ ಭಾವಿ ಮಾಡಿಸಿಕೊಡಿ. ದಲಿತರ ಜಾಗವನ್ನು ಅತಿಕ್ರಮಿಸಿ ರಸ್ತೆ ತ್ಯಾಜ್ಯ, ಇಲೇವಾರಿ ಮಾಡುತ್ತಿದ್ದಾರೆ. ದಲಿತರಿಗೆ ಕಾನೂನು ಅರಿವಿ ಕಾರ್ಯಕ್ರಮ ಹಾಗೂ ಆರು ತಿಂಗಳಿಗೊಂದಾದರೂ ಕುಂದುಕೊರತೆ ಸಭೆ ಆಯೋಜಿ ಎಂಬ ಸಮಸ್ಯೆ ಸಲಹೆಗಳು ಸಭೆಯಲ್ಲಿ ಕೇಳಿಬಂತು.
ಪರಿಶಿಷ್ಟ ಜಾತಿ, ಪಂಗಡಗಳ ಹಲವಾರು ಸಮಸ್ಯೆಗಳನ್ನು ಆಲಿಸಿ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಆದೇಶಿದರು.
ಇದಕ್ಕೆ ಸ್ಪಂದಿಸಿದ ಮುಂದಿನ ಎರಡು ಮೂರು ದಿನಗಳೊಗೆ ಇವರ ಮನೆಗೆ ವಿದ್ಯುತ್ ಸರಬರಾಜು ಮತ್ತು ಕುಡಿಯುವ ನೀರಿಗೂ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಪದವೀದರೆಯಾದರೂ ಉದ್ಯೋಗ ಸಿಗದ ಯುವತಿಗೆ ಏನಾದರು ಉದ್ಯೋಗದ ವ್ಯವಸ್ಥೆ ಇದ್ದರೆ ನಾನು ಪ್ರಯತ್ನಿಸುತ್ತೇನೆ ಎಂದು ಸಾಂತ್ವನ ಹೇಳಿದರು.
ಪರಿಶಿಷ್ಟ ವರ್ಗ ಜಾತಿ ಸಮುದಾಯದವರು ಚೆನ್ನಾಗಿದ್ದರೆ ಮಾತ್ರ ನಮ್ಮ ಸಮಾಜ ಆರೋಗ್ಯಪೂರ್ಣವಾಗಿದೆ ಎಂದು ಅರ್ಥ. ಆ ನಿಟ್ಟಿನಲ್ಲಿ ಈ ವರ್ಗದ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಒಂದು ಕ್ರೀಯಾಯೋಜನೆಯ ರೀತಿಯಲ್ಲಿ ಆಂದೋಲನದ ತರ ಮಾಡೀಕಾಗಿದ್ದು ಬದ್ದತೆಯಿಂದ ಕೆಲಸ ಮಾಡುತ್ತೇನೆ ಎಂದು ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು.
ಉಡುಪಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಮೇಶ್ ನಾಯಕ್,ಕಾಪು ತಾಲೂಕು ಕಾರ್ಯ ನಿರ್ವಹ ಣಾಧಿಕಾರಿ ಜೇಮ್ಸ್, ಕಾಪು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಎಸ್‍ಡಿ ಕಾಪು ಪೋಲಿಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್ ಮಾನೆ ಉಪಸ್ಥಿತರಿದ್ದರು. ಕಾಪು ತಾಲೂಕು ಕಚೇರಿ ಸಿಬ್ಬಂದಿ ದೇವಕಿ ಸ್ವಾಗತಿ, ವಂದಿಸಿದರು.