ನಾಟೆಕಲ್: ಮಜ್ಲಿಸುನ್ನೂರು ಸಂಗಮ
ಮಂಗಳೂರು : ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಮ್ ಅಕಾಡಮಿ ನಾಟೆಕಲ್ ಮಂಗಳನಗರ ಇದರ ಆಶ್ರಯದಲ್ಲಿ ಮಜ್ಲಿಸುನ್ನೂರ್ ಸಂಗಮವು ಸಂಸ್ಥೆಯ ವಠಾರದಲ್ಲಿ ಜರಗಿತು. ಮುನಾಜಾತ್ ದುಆ ಮಜ್ಲಿಸ್ ನೆರವೇರಿಸಲಾಯಿತು.
ಭಾಷಣಕಾರರಾಗಿ ಆಶಿಕ್ ದಾರಿಮಿ ಕೊಲ್ಲಮ್ ಭಾಗವಹಿಸಿದರು. ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಸ್ತಾದ್ ಕೆಬಿ ದಾರಿಮಿ ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಖತೀಬ್ ಆಸಿಫ್ ಅಝ್ಹರಿ ದುಆಗೈದರು.
ತಬೂಕ್ ದಾರಿಮಿ, ಮುದರ್ರಿಸ್ ಹನೀಫ್ ದಾರಿಮಿ, ಶಾಫಿ ನಂದಾವರ, ನಝೀರ್ ಉಳ್ಳಾಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಹೀಮ್ ತಲಮುಗರು, ಸುಲೈಮಾನ್ ಹಾಜಿ ಬೈತಡ್ಕ,ಬಿ.ಮುಹಮ್ಮದ್ ತಲಕ್ಕಿ, ಅಬ್ದುಲ್ ರಹಿಮಾನ್ ಹಾಜಿ ಆಲಾಡಿ, ಮುಹಮ್ಮದ್ ಮುಸ್ಲಿಯಾರ್ ಮಾಡಾವು, ಸಿರಾಜ್ ಅಶ್ಶಾಫಿ, ಶರೀಫ್ ಲತೀಫೀ, ಝುಬೈರ್ ದಾರಿಮಿ, ಇಸ್ಮಾಯೀಲ್ ಪಡ್ಪು, ಜಮಾಲುದ್ದೀನ್, ಬಶೀರ್ ಮಂಗಳನಗರ, ಸಿಎಚ್ ಮುಹಮ್ಮದ್, ಅಶ್ರಫ್ ಮರಾಠಿಮೂಲೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಲತೀಫ್ ದಾರಿಮಿ ಸ್ವಾಗತಿಸಿದರು. ವಿದ್ಯಾರ್ಥಿ ಲುಖ್ಮಾನ್ ಕಿರಾಅತ್ ಪಠಿಸಿದರು.