×
Ad

ಸಿರಿ ಮಹಾ ಕಾವ್ಯ ಸ್ತ್ರಿಸಂವೇದನೆಯ ಪ್ರತೀಕ: ಡಾ.ಗಾಯತ್ರಿ ನಾವಡ

Update: 2024-01-21 22:50 IST

ಮಂಗಳೂರು: ಸಿರಿ ಮಹಾಕಾವ್ಯವು ಸ್ತ್ರೀ ಸಂವೇದನೆ, ಸ್ವಾತಂತ್ರ್ಯದ ಪ್ರತೀಕವಾಗಿದೆ. ಸಿರಿಯು ಸ್ತ್ರೀತನಕ್ಕೆ ಆತ್ಮಶಕ್ತಿಯಾ ಗಿದ್ದಾಳೆ ಎಂದು ಡಾ.ಗಾಯತ್ರಿ ನಾವಡ ತಿಳಿಸಿದ್ದಾರೆ.

ನಗರದ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಆರನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ತುಳು ಮಹಾಕಾವ್ಯ ಸಿರಿ ಆಧಾರಿತ ವಿಚಾರಗೋಷ್ಠಿಯಲ್ಲಿ ಅವರು ವಿಚಾರ ಮಂಡಿಸಿದರು.

ಸಿರಿ ಕೌಟುಂಬಿಕ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನ ಎದುರಿಸಿ ಹೆಣ್ಣು ನಮಗೆ ಮಾದರಿಯಾಗಿ, ಲಿಂಗರಾಜಕಾರಣ ದಿಂದ ಎದ್ದು ಬಂದ ಕಾರಣ ತುಳುನಾಡಿನಲ್ಲಿ ಆರಾಧಿಸಲ್ಪಡುತ್ತಾಳೆ. ಸಿರಿಜಾತ್ರೆಯಲ್ಲಿ ನಾವು ಗಮನಿಸುವುದು ಸಿರಿಪಾತ್ರ ಧಾರಿಯಾದವರಿಗೆ ಅನುಭಾವಿಕ ಲೋಕವೊಂದು ಸೃಷ್ಟಿಯಾಗುತ್ತದೆ. ಭಾರತೀಯ ಮತ್ತು ಪಾಶ್ಚಾತ್ಯ ಸ್ತ್ರೀವಾದದಲ್ಲಿ ನಮಗೆ ಕಾಣುವುದು ಸಂಪೂರ್ಣ ತದ್ವರುದ್ಧವಾದ ಆಲೋಚನೆಗಳು. ಭಾರತೀಯ ಕರಾವಳಿಯ ಸಂಸ್ಕೃತಿಯಲ್ಲಿ ಮಹಿಳೆ ಮಾತೃ ರೂಪಿಯಾಗಿ ಕಾಣಿಸುತ್ತಾಳೆ, ಇದುವೇ ನಮ್ಮ ವಿಶೇಷತೆಎಂದು ಗಾಯತ್ರಿ ನಾವಡ ವಿವರಿಸಿದರು.

ಈಗಿರುವ ತುಳುನಾಡಿನ ಎಲ್ಲಾ ಆಚರಣೆಗಳು ಹಿರಿಯರ ಮಾರ್ಗದರ್ಶನದಿಂದಲೇ ನಡೆದುಕೊಂಡು ಬಂದಿದೆ. ಅದಕ್ಕೇ ನಮ್ಮ ಪ್ರಾಮುಖ್ಯತೆ. ಬೇರೆ ಯಾವ ದೈವಾರಾಧನೆಗೂ ಸಿರಿಯ ಆರಾಧನೆಗೂ ಸ್ಪಷ್ಟ ವ್ಯತ್ಯಾಸವಿದೆ. ತುಳುನಾಡಿನ ವಿವಿಧ ಪ್ರದೇಶಗಳಲ್ಲಿ ಸಿರಿ ಜಾತ್ರೆ, 7 ಸಿರಿಯರು ಮತ್ತು ಕುಮಾರನ ಆರಾಧನೆಗಳಲ್ಲಿ ಪ್ರತ್ಯೇಕತೆಗಳಿವೆ. ದಬ್ಬಾಳಿಕೆಗಳೆಲ್ಲವನ್ನು ಮೀರಿ ಸಿರಿ ಹೊರಬಂದಿರುವುದು ಒಂದು ಶಕ್ತಿ ಎಂದು ರವೀಶ್ ಪಡುಮಲೆ ಹೇಳಿದರು.

ತುಳು ಮಹಾಕಾವ್ಯ ಸಿರಿ ಆಧಾರಿತ ವಿಚಾರಗೋಷಿಯನ್ನು ವಿವೇಕಾದಿತ್ಯ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News