×
Ad

ಮಂಗಳೂರು: ಎರಡನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಕ್ಕೆ ಚಾಲನೆ

Update: 2024-01-24 23:09 IST

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಂಗಳೂರಿನಲ್ಲಿ ಐದು ದಿನಗಳ ಕಾಲ ಆಯೋಜಿಸಿದ ಎರಡನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಕ್ಕೆ ಬುಧವಾರ ಚಾಲನೆ ದೊರೆಯಿತು.

ಉದ್ಘಾಟಿಸಿದ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ತುಳುನಾಡಿನ ಆಹಾರ ಪದ್ಧತಿಗೆ ವಿಶೇಷ ಸ್ಥಾನವಿದೆ. ಈ ರೀತಿಯ ಎಲ್ಲಾ ರೀತಿಯ ಆಹಾರವನ್ನು ಸಾರ್ವಜನಿಕರಿಗೆ ಆಸ್ವಾಧಿಸಲು ಅವಕಾಶ ನೀಡಲಾಗಿರುವುದು ಶ್ಲಾಘನೀಯ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದರು. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ‘ತಿಂಡಿ’ ಕೈಪಿಡಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಕೆ, ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಸ್ಥಾಯಿ ಸಮಿತಿ ಸದಸ್ಯರಾದ ಗಣೇಶ್ ಕುಲಾಲ್, ಭರತ್, ವರುಣ್ ಚೌಟ, ಲೋಹಿತ್ ಅಮೀನ್, ಕೋಟಕ್ ಮಹೇಂದ್ರ ಬ್ಯಾಂಕ್‌ನ ವಾಮನ್ ಭಗತ್, ಪ್ರಮುಖರಾದ ನಿತಿನ್ ಕುಮಾರ್, ರವಿಶಂಕರ ಮಿಜಾರ್, ವಿಜಯ ಕುಮಾರ್, ನರೇಶ್ ಶೆಣೈ, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಪ್ರತಿಷ್ಠಾನದ ಅಧ್ಯಕ್ಷ ದಿವಾಕರ ಪಾಂಡೇಶ್ವರ, ಉದಯ ಪೂಜಾರಿ, ಯತೀಶ್ ಬೈಕಂಪಾಡಿ, ಡಾ. ರಾಘವೇಂದ್ರ ಹೊಳ್ಳ, ಗೌತಮ್ ಪೈ, ಗುರು ಬಾಳಿಗ, ಸುರೇಂದ್ರ ಜಪ್ಪಿನಮೊಗರು, ವಾಸುದೇವ ಕಾಮತ್, ನರೇಶ್ ಪ್ರಭು ರೂಪಾ ಡಿ. ಬಂಗೇರ ಸಹಿತ ಮನಪಾ ಸದಸ್ಯರು, ಮತ್ತಿತರರು ಇದ್ದರು. ಆರ್ ಜೆ ಕಿರಣ್ ನಿರೂಪಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News