ಕಾಟಿಪಳ್ಳ ನೂರುಲ್ ಹುದಾ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ
Update: 2024-01-26 22:34 IST
ಮಂಗಳೂರು,ಜ.26: ಕಾಟಿಪಳ್ಳದ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಶಾಲಾ-ಕಾಲೇಜಿನಲ್ಲಿ ನಡೆದ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಪಣಂಬೂರು ಮುಸ್ಲಿಂ ಜಮಾಅತ್-ಕಾಟಿಪಳ್ಳ ಇದರ ಅಧ್ಯಕ್ಷ ಎಸ್.ರಹ್ಮತುಲ್ಲಾ ನೆರವೇರಿಸಿದರು.
ಸುರತ್ಕಲ್ ಠಾಣೆಯ ಎಎಸ್ಸೈ ಮಂಜುನಾಥ್, ಸಂಸ್ಥೆಯ ಕಾರ್ಯದರ್ಶಿ ಜಿ.ಮುಹಮ್ಮದ್, ಕೋಶಾಧಿಕಾರಿ ಪಿ.ಎ.ಎಂ. ಶರೀಫ್, ಸಹ ಟ್ರಸ್ಟಿ ಯಂ.ಅಬ್ದುಲ್ ಖಯ್ಯೂಮ್, ಪ್ರಾಂಶುಪಾಲೆ ರೇಖಾ ಬಿ, ಹ್ಯೆಸ್ಕೂಲ್ ಮುಖ್ಯ ಶಿಕ್ಷಕಿ ಆರಿಫಾ ಮತ್ತು ಪಿಟಿಎ ಉಪಾಧ್ಯಕ್ಷೆ ಆಬಿದಾ ಶರೀಫ್ ಉಪಸ್ಥಿತರಿದ್ದರು.
ಸಂಚಾಲಕ ಪಿ.ಎ.ಇಲ್ಯಾಸ್ ಸ್ವಾಗತಿಸಿದರು. ಸಹ ಶಿಕ್ಷಕಿ ಜೆಸಿಂತಾ ವಂದಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಗುಲ್ನಾಝ್ ಕಾರ್ಯಕ್ರಮ ನಿರೂಪಿಸಿದರು.