×
Ad

ಮೂಡುಶೆಡ್ಡೆ-ಎದುರುಪದವು: ಹಯಾತುಲ್ ಇಸ್ಲಾಂ ಮಸೀದಿ-ಮದ್ರಸದಲ್ಲಿ ಗಣರಾಜ್ಯೋತ್ಸವ

Update: 2024-01-26 22:35 IST

ಮಂಗಳೂರು,ಜ.26 :ಮೂಡುಶೆಡ್ಡೆ-ಎದುರುಪದವು ಹಯಾತುಲ್ ಇಸ್ಲಾಂ ಮಸೀದಿ-ಮದ್ರಸದ ವತಿಯಿಂದ ನಡೆದ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಜಮಾಅತ್‌ನ ಅಧ್ಯಕ್ಷ ಮೈಯ್ಯದ್ದಿ ಮತ್ತು ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮದ್ರಸದ ಸದರ್ ಮುಅಲ್ಲಿಂ ಜುಬೈರ್ ಯಮಾನಿ ಜೋಕಟ್ಟೆ, ಮುಅಲ್ಲಿಂ ಅಬ್ದುಲ್ ಖಾದರ್ ಸಅದಿ, ಮಾಜಿ ಕಾರ್ಯದರ್ಶಿ ಅಬ್ದುಲ್ ಖಾದರ್, ಕೋಶಾಧಿಕಾರಿ ಮನ್ಸೂರ್, ಅಬ್ದುಲ್ ಖಾದರ್ ಎ.ಕೆ., ಬದ್ರಿಯಾ ಯಂಗ್‌ಮೆನ್ಸ್ ಅಧ್ಯಕ್ಷ ಅಲ್ತಾಫ್, ಕಾರ್ಯದರ್ಶಿ ಅಹ್ಮದ್ ಬಾವ, ಜೊತೆ ಕಾರ್ಯದರ್ಶಿ ಆರೀಫ್, ಸದಸ್ಯರಾದ ಇಕ್ಬಾಲ್ ಸಿಎಚ್, ಶೇಖ್ ಅಬ್ದುಲ್ ಖಾದರ್, ಅಥಾವುಲ್ಲ, ಸಿರಾಜ್ ಮಳಲಿ, ಯಾಕೂಬ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News