ಮಂಗಳೂರು: ಬ್ರ್ಯಾಂಡೆಡ್ ಉಡುಪುಗಳ ಮಾರಾಟ ಮೇಳ ಆರಂಭ
ಮಂಗಳೂರು, ಜ.26: ರೆಡಿಮೇಡ್ ಉಡುಪುಗಳ ಬೃಹತ್ ಮಾರಾಟ ಮೇಳವು ನಗರದ ಎಂ.ಜಿ.ರಸ್ತೆಯ ಟಿಎಂಎಪೈ ಕನ್ವೆನ್ಶನ್ ಸೆಂಟರ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಶುಕ್ರವಾರ ಅರಂಭಗೊಂಡಿದ್ದು, ಜ.29ರಂದು ಕೊನೆಗೊಳ್ಳಲಿದೆ.
ಏಳು ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಶೋ ರೂಮ್‌ಗಳು ಮುಚ್ಚಿದ ಹಿನ್ನೆಲೆಯಲ್ಲಿ ಅಲ್ಲಿನ ಸರಕುಗಳನ್ನು ಮಂಗಳೂರಿ ನಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೃಹತ್ ಮಾರಾಟ ಮೇಳದಲ್ಲಿ ಮಹಿಳೆಯರ, ಪುರುಷರ ಹಾಗೂ ಮಕ್ಕಳ ರೆಡಿಮೇಡ್ ಉಡುಪುಗಳ ಅಪಾರ ಸಂಗ್ರಹವಿದ್ದು, ಅತಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ರೂ. 699ರಿಂದ 2,999ರವರೆಗಿನ ಮಹಿಳೆಯರ ಉಡುಪುಗಳಾದ ವೆಸ್ಟರ್ನ್ ಟಾಪ್, ಟಿ-ಶರ್ಟ್ಸ್, ಲೆಗ್ಗಿಂಗ್ಸ್, ಕುರ್ತಿ, ಬಾಟಮ್ ಜೀನ್ಸ್, ಶಾರ್ಟ್ಸ್ ಇತ್ಯಾದಿಗಳು ಕೇವಲ 250ರಿಂದ 500 ರೂ.ಗಳಲ್ಲಿ ದೊರೆಯಲಿದೆ. 799ರಿಂದ 14,999 ರೂ. ಮೌಲ್ಯದ ಪುರುಷರ ಉಡುಪುಗಳಾದ ರೌಂಡ್ ನೆಕ್ ಟಿ-ಶರ್ಟ್ಸ್, ಪೋಲೋ ಟಿ- ಶರ್ಟ್ಸ್, ಟಿ- ಶರ್ಟ್ಸ್, ಜೀನ್ಸ್, ಶರ್ಟ್ಸ್, ಬ್ಲೇಝರ್, ಟ್ರ್ಯಾಕ್ ಪ್ಯಾಂಟ್, ಶಾರ್ಟ್, ಜಾಕೆಟ್ಸ್, ಪುಲ್ಲೋವರ್‌ಗಳು ಕೇವಲ 300ರಿಂದ 2000 ರೂ.ನಲ್ಲಿ ಲಭಿಸುತ್ತದೆ.
1,199 ರಿಂದ 4999 ರೂ. ಮೌಲ್ಯದ ಪುರಷರ ಶೂ ಮತ್ತು ಪಾದರಕ್ಷೆಗಳು ಕೇವಲ 500ರಿಂದ 2,000 ರೂ.ನಲ್ಲಿ ದೊರೆಯಲಿದ್ದು, 1,499ರಿಂದ 2,999 ರೂ. ಮೌಲ್ಯದ ಮಹಿಳೆಯರ ಶೂ ಮತ್ತು ಪಾದರಕ್ಷೆಗಳು ಕೇವಲ 300ರಿಂದ 500 ರೂ.ಗಳಲ್ಲಿ ಲಭಿಸಲಿದೆ ಎಂದು ಪ್ರಕಟನೆ ತಿಳಿಸಿದೆ.