×
Ad

ಬಜಗೋಳಿ: ಭಗವಾನ್ ಮುನಿಸುವ್ರತ ಸ್ವಾಮಿ ವಾರ್ಷಿಕೋತ್ಸವ, ಬಾಹುಬಲಿ ಮಹಾ ಮಸ್ತಕಾಭಿಷೇಕ ಮಹೋತ್ಸವ

Update: 2024-01-28 21:28 IST

ಕಾರ್ಕಳ: ಬಜಗೋಳಿ ಐತಿಹಾಸಿಕ ಪರಮ ಪುನೀತ ಧರ್ಮ ಶಾಲೆ, ತೀರ್ಥ ಸುಮ್ಮಗುತ್ತು ಬಂಡ ಸಾಲೆ ಬಜಗೋಳಿ ಇಲ್ಲಿಯ ಭಗವಾನ್ ಮುನಿಸುವ್ರತ ಸ್ವಾಮಿ ವಾರ್ಷಿಕೋತ್ಸವ ಹಾಗೂ ಭಗವಾನ್ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ ಮಹೋತ್ಸವ ವಿಮಾನ ಶುದ್ಫಿ ಭಗವಾನ್ ಬಾಹುಬಲಿ ಸ್ವಾಮಿ ಮಹಾ ಮಸ್ತಕಾಭಿಷೇಕ, ಉಸ್ಸವ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ವಿವಿಧ ಸೇವಾರ್ಥಿಗಳಿಂದ ತೋರಣ ಮಹೂರ್ತ ವಿಮಾನ ಶುದ್ದಿ ಲಲಿತಮ್ಮ ಮತ್ತು ಮಕ್ಕಳು, ಸುಮ್ಮ ಗುತ್ತು ಬಂಡ ಸಾಲೆ ಬಜಗೋಳಿ ನಾಗ ದೇವರ ಷೋಡಶೋಪಚಾರ ಪೂಜೆ ಸೇವೆ, ಟಿ. ಜೀವಂದರ ಹೆಗ್ಡೆ ಮೂಡುಬಿದಿರೆ ಕ್ಷೇತ್ರ ಪಾಲ ಷೋಡಶೋಪಚಾರ ಪೂಜೆ ಸೇವೆ, ಮಹಾವೀರ ಜೈನ್ ನಲ್ಲೂರು ಭುಜಬಲಿ ಹೆಗ್ಡೆ, ಮಾಳ ಭೈರವಿ ಪದ್ಮಾವತಿ ಷೋಡಶೋಪಚಾರ ಸೇವೆ, ಮಹೇಂದ್ರ ಜೈನ್ & ಫ್ಯಾಮಿಲಿ ಪುದಿಯಡ ವಯಾನಾಡ್, ಕೂಷ್ಮಾಂಡಿನಿ ದೇವಿ ಷೋಡ ಶೋಪಚಾರ ಸೇವೆ, ವಿನಂತಿ ಶಶಿಕಾಂತ್ ಹೆಗ್ಡೆ ಲಕ್ಷ ಹೂವಿನ ಪೂಜೆ ಮುಖ ವಸ್ತ್ರ ಉದ್ಘಾಟನೆ ಕಿರಣ್ ಕುಮಾರ್ ಪೆರ್ಮುಡೆ ಗುತ್ತು ಮಾಳ ಭಗವಾನ್ ಶ್ರೀ ಶ್ರೀ ಶ್ರೀ 1008 ಮುನಿ ಸುವ್ರತ ಸ್ವಾಮಿ ಗೆ ಮಹಾ ಅಭಿಷೇಕ, ಉತ್ಸವ ನಿಧಿ ಅಮಿತ್ ಜೈನ್ ಗುರು ಗ್ರಾಸ್ಥಾಪಕ೯ಣ ಭಗವಾನ್1008 ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಗೆ 108 ಕಲಶ ಗಳಿಂದ ಮಸ್ತಕಾಭಿಷೇಕ ಬಜಗೋಳಿ ಧರ್ಮ ಶಾಲೆ ತೀರ್ಥ ದಲ್ಲಿ ಜರುಗಿತು.

ಮೂಡು ಬಿದಿರೆ ಸ್ವಾಮೀಜಿ ಮಧ್ಯಾಹ್ನ ಜರುಗಿದ ಕಾರ್ಯಕ್ರಮ ದಲ್ಲಿ ಆಶೀರ್ವಾದ ನೀಡಿ ತ್ಯಾಗ ವೀರ ಬಾಹುಬಲಿ ಸ್ವಾಮಿ ಅಭಿಷೇಕ ದಿಂದ ಮನಸ್ಸು ಧರ್ಮ ದ ಕಡೆಗೆ ಪರಿವರ್ತಿಸಲು ಪ್ರೇರಣೆ ಸಿಗುದು, ಧಾರ್ಮಿಕ ಜನ ರಿಂದ ಧರ್ಮ ದ ರಕ್ಷಣೆ ಸಾಧ್ಯ ಎಂದರು ಮಧ್ಯಾಹ್ನ ವಿಮಾನ ಶುದ್ದಿ ಮುಖ ವಸ್ತ್ರ ಉದ್ಘಾಟನೆ ಮೂಲಕ ಭಗವಾನ್ ಮುನಿ ಸುವ್ರತ ಸ್ವಾಮಿ ದರ್ಶನ ಮಹಾ ಅರ್ಗ್ಯ ನೆರವೇರಿತು ಯಂ ಏನ್ ರಾಜೇಂದ್ರ ಕುಮಾರ್ ರನ್ನು ಸ್ವಾಮೀಜಿ ಹರಸಿ ಆಶೀರ್ವದಿಸಿದರು.

ಹಿರಿಯ ರಾದ ವಿ ಕೆ ಜೈನ್ ಪುತ್ತೂರು, ತೋಡಾರ್ ಜೀವಂದರ ಹೆಗ್ಡೆ, ಕಿರಣ್ ಕುಮಾರ್, ನಲ್ಲೂರು ಮಹಾವೀರ ಜೈನ್, ವಜ್ರ ನಾಭ ಚೌಟ, ರಾತ್ರಿ ಮಹಾ ಮಸ್ತಕಾಭಿಷೇಕ ಉಸ್ಸವ ದ ಕಾರ್ಯಕ್ರಮ ದಲ್ಲಿ ಸುರೇಂದ್ರ ಕುಮಾರ್ ,ಅನಿತಾ ದಂಪತಿಗಳು,ಲಾಲ್ ಗೋಯಲ್ ರಜನಿ ಜೈನ್ ದಂಪತಿಗಳು ಉಪಸ್ಥಿತರಿದ್ದರು

ಮುನಿರಾಜ್ ರೆಂಜಾಳ ಬಾಹುಬಲಿ ತ್ಯಾಗ ಸಂದೇಶ ವಿವಿಧ ಧಾರ್ಮಿಕ ಆಗಮ ಗಳಲ್ಲಿ ಕಾವ್ಯ ಮಯ ವಾಗಿ ಮೂಡಿ ಜನ ರಲ್ಲಿ ಧರ್ಮ ಜಾಗೃತಿ ಮೂಡಿಸಿದ ದೇವಾ ದಿ ದೇವರು ಬಾಹುಬಲಿ ಸ್ವಾಮಿ ಎಂದು ಉಲ್ಲೇಖಿ ಸಿದರು ಭರತ್ ಜೈನ್ ವೀಕ್ಷಕ ವಿವರಣೆ ಮಾಡಿದರು, ಹಚ್ಚಾ ಡಿ ಅಜಿತ್ ಇಂದ್ರ, ನಿರ್ವಾಣ ಇಂದ್ರ ಭರತ್ ಇಂದ್ರ ಹರ್ಷೇ o ದ್ರ ಇಂದ್ರ ಪೂಜಾ ಕ್ರಿಯೆ ನೆರವೇರಿಸಿ ದರು ನಂತರ ಮಹಾ ಮಸ್ತಕಾಭಿಷೇಕ ವಿವಿಧ ದ್ರವ್ಯ ಗಳಿಂದ ನೆರವೇರಿತು

ಎಳನೀರು ಅಭಿಷೇಕ ಸಂದೀಪ್ ಜೈನ್ ಇಕ್ಷು ರಸ ಧರ್ಮಣ್ಣ ನಿಟ್ಟೆ,ಧಾನ್ಯ ಅಭಿಷೇಕ ಸೂರ್ಯಗುತ್ತು ಜಯಮ್ಮ ಜಯನ್, ವಯಾನಾಡ್ ನಿರ್ಮಲ ಕುಮಾರ ಜೈನ್, ಕಲ್ಕ ಚೂರ್ಣ ಅಭಿಷೇಕ ಪಾಪ್ಲಾಡಿ ಕುಟುಂಬಸ್ಥರು, ಧನ ಕೀರ್ತಿ ಬಲಿಪ ಹಂಡೇಲು ಗುತ್ತು ಕಾಶ್ಮೀರಿ ಕೇಸರಿ, ಕೇಸರಿ ಅಭಿಷೇಕ ಪದ್ಮಲತಾ ವೀರ ಸೇನ, ನವ್ಯ ತೇಜಸ್ ಕುಟುಂಬ ದವರು ಅರಶಿಣ ಅಭಿಷೇಕ ಸುಮ್ಮ ಗುತ್ತು ಉದಯ್ ಹೆಗ್ಡೆ ಬೆಂಗಳೂರು ಕಷಾಯ ಅಭಿಷೇಕ ವನ್ನು ರಾಜೇಂದ್ರ ಮಠ ಮಾಳ , ಚತುಷ್ ಕೋಣ ಅಭಿಷೇಕ ಮಲ್ಲಾರ ಬೀಡು ಕುಟುಂಬ ಹಾಗೂ ಚಂದ್ರರಾಜ ಹೆಗ್ಡೆ ಇರ್ವತ್ತೂರು ಶ್ರೀ ಗಂಧ ಅಭಿಷೇಕ ವಜ್ರನಾಭ ಚೌಟ ದೊಡ್ಡ ಮನೆ ನಲ್ಲೂರು ,ಚಂದನ ದ ಅಭಿಷೇಕ ಮಹಾವೀರ್ ಕಂಬಳಿ ಅಳಿಯೂರು ಅಷ್ಟ ಗಂಧ ದ ಅಭಿಷೇಕ ಸುಕಿರ್ತಿ ಅಜ್ರಿ ಕನಕ ಪುಷ್ಪ ವ್ರಷ್ಟಿ ನೇರವೇರಿಸಿದರು.

ಮಹಾ ಶಾಂತಿ ಧಾರ ವಕೀಲ ರಾದ ಸುವ್ರತ ಕುಮಾರ್, ದಿವಿಜೇಂದ್ರ ನಡೆಸಿದರು. ಮಹಾ ಮಂಗಳ ಆರತಿ ಬಳಿಕ ಶ್ರೀ ಶ್ರೀ ಗಳ ಪಾದ ಪೂಜೆ ನೆರವೇರಿತು. ವೀರoಜಯ ಕುಮಾರ್ ಹೆಗ್ಡೆ ಸ್ವಾಗತಿಸಿದರು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News