×
Ad

ದ.ಕ. ಜಿಲ್ಲೆ: ಎಸಿಪಿ, ಇನ್‌ಸ್ಪೆಕ್ಟರ್‌ಗಳಿಗೆ ವರ್ಗಾವಣೆ

Update: 2024-01-30 22:35 IST

ಮಂಗಳೂರು: ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಎಸಿಪಿ ಹಾಗೂ ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ಗೆ ವರ್ಗಾವಣೆಯಾಗಿದೆ.

ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್‌ಗೆ ಮೈಸೂರು ಹಾಗೂ ಲೋಕಾಯುಕ್ತಕ್ಕೆ ವರ್ಗಾ ವಣೆ ಆದೇಶದಲ್ಲಿದ್ದ ಪ್ರತಾಪ್ ಸಿಂಗ್ ತೋರಾಟ್‌ಗೆ ಮಹೇಶ್ ಕುಮಾರ್‌ರಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆಯಾಗಿದೆ.

ಸುಳ್ಯ ವೃತ್ತದ ಮೋಹನ್ ಕೊಠಾರಿ ಅವರನ್ನು ಡಿಸಿಆರ್‌ಇ ಮಂಗಳೂರಿಗೆ, ಮಂಗಳೂರು ಪಶ್ಚಿಮ ಸಂಚಾರ ಠಾಣೆಯಿಂದ ಕೃಷ್ಣಾನಂದ ಜಿ.ನಾಯಕ್ ಅವರನ್ನು ದಕ್ಷಿಣ ಸಂಚಾರ ಠಾಣೆಗೆ, ಸಿಐಡಿಗೆ ವರ್ಗಾವಣೆ ಆದೇಶದಲ್ಲಿರುವ ಬಸಲಿಂಗಯ್ಯ ಜಿ. ಸುಬ್ರಪುರಮಠ್ ಅವರನ್ನು ಬೆಳ್ತಂಗಡಿ ಠಾಣೆಗೆ, ಕೊಣಾಜೆ ಠಾಣೆಯಿಂದ ಮಂಗಳೂರು ನಗರಕ್ಕೆ ವರ್ಗಾವಣೆ ಆದೇಶದಲ್ಲಿ ರುವ ನಾಗೇಶ್ ಎಸ್.ಹಸ್ಲರ್ ಅವರನ್ನು ಬರ್ಕೆ ಠಾಣೆಗೆ, ಪುತ್ತೂರು ನಗರ ಠಾಣೆಯಿಂದ ಸುನಿಲ್ ಕುಮಾರ್ ಎಂ.ಎಸ್. ಅವ ರನ್ನು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News