ಬಿರುವೆರ್ ಕುಡ್ಲದ ‘ಫುಡ್‌ಫೆಸ್ಟ್’ ಲಾಭಾಂಶದ ಹಣ ಅರ್ಹರಿಗೆ ಹಸ್ತಾಂತರ
ಮಂಗಳೂರು: ಉದಯ ಪೂಜಾರಿ ಬಳ್ಳಾಲ್‌ಬಾಗ್ ನೇತೃತ್ವದ ಫ್ರೆಂಡ್ಸ್ ಬಳ್ಳಾಲ್‌ಬಾಗ್, ಬಿರುವೆರ್ ಕುಡ್ಲವು ಇತ್ತೀಚೆಗೆ ನಗರದಲ್ಲಿ ನಡೆದ ಫುಡ್‌ಫೆಸ್ಟ್‌ನ ಲಾಭಾಂಶದ 2.50 ಲಕ್ಷ ರೂ.ವನ್ನು ಚಿಕಿತ್ಸೆಗೆ ಅರ್ಹರಾದ ಐವರಿಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಜರುಗಿದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್, ಶಾಸಕ ವೇದವ್ಯಾಸ ಕಾಮತ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಅಧ್ಯಕ್ಷ ಗಿರಿಧರ್ ಶೆಟ್ಟಿ, ರಣದೀಪ್ ಕಾಂಚನ್, ಜೋಸೆಫ್ ಕ್ರಾಸ್ತ ಮಾರ್ಟಿನ್, ರಾಧಾಕೃಷ್ಣ, ವಸಂತ ಪೂಜಾರಿ, ಉದಯ ಪೂಜಾರಿ ಬಳ್ಳಾಲ್‌ಬಾಗ್, ಜಿತೇಶ್ ಜೈನ್, ದರ್ಶನ್ ಜೈನ್, ಪ್ರಕಾಶ್ ಪಾಂಡೇಶ್ವರ, ಪ್ರಮೋದ್ ಬಳ್ಳಾಲ್‌ಬಾಗ್, ರಜನಿ ಶೆಟ್ಟಿ, ರಾಕೇಶ್ ಪೂಜಾರಿ, ಲತೀಶ್ ಪೂಜಾರಿ, ರಾಕೇಶ್ ಚಿಲಿಂಬಿ, ವಿನೀತ್ ಬಂಗೇರ, ಮಹೇಶ್ ಪೂಜಾರಿ, ಕಿರಣ್ ಪೂಜಾರಿ ಬಂಟ್ವಾಳ, ರಾಮ, ಲೋಹಿತ್ ಗಟ್ಟಿ, ದಿನಿಲ್, ವಿಖ್ಯಾತ್ ಪೂಜಾರಿ, ರೋಷನ್ ಮೆನೆಜಸ್ ಬೋಳೂರು, ಕಿಶೋರ್ ಬಾಬು, ರಾಜೇಶ್ ಉರ್ವ, ವಾಝಿ ಪದವಿನಂಗಡಿ, ಕಿರಣ್ ಶೆಟ್ಟಿ, ರೋಷನ್ ಬಳ್ಳಾಲ್‌ಬಾಗ್, ಸುನೀಲ್ ಶೆಟ್ಟಿ ಬಳ್ಳಾಲ್‌ಬಾಗ್, ಜಗದೀಶ್ ಕದ್ರಿ, ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್, ಶರಣ್, ವಾಸೀಮ್ ಮತ್ತಿತರಿದ್ದರು.