×
Ad

ಬಡ ಮಹಿಳೆಗೆ ಮನೆ ಹಸ್ತಾಂತರ; ನುಸ್ರತ್ ಸಂಘಟನೆಯ ಮಾದರಿ ಕೆಲಸಗಳು ಸಮಾಜಕ್ಕೆ ಪ್ರೇರಣೆ : ಶಾಸಕಿ ಭಾಗೀರಥಿ ಮುರುಳ್ಯ

Update: 2024-01-31 22:08 IST

ಸುಳ್ಯ: ಎಲಿಮಲೆ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಇದರ 40ನೇ ವರ್ಷದ ಪ್ರಯುಕ್ತ 40 ಕಾರ್ಯಕ್ರಮಗಳ ಯೋಜನೆಗಳ ಪೈಕಿ ಬಡ ಮಹಿಳೆಗೆ ಪಂಚಾಯತ್ ಸಹಕಾರದೊಂದಿಗೆ ನಿರ್ಮಾಣಗೊಂಡ ಮನೆ ಉದ್ಘಾಟನೆ ಮತ್ತು ಹಸ್ತಾಂತರ ಕಾರ್ಯಕ್ರಮವು ಜ.31 ರಂದು ಎಲಿಮಲೆ ಜಿರ್ಮುಖಿಯಲ್ಲಿ ನಡೆಯಿತು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ನೂತನ ಮನೆಯನ್ನು ಉದ್ಘಾಟಿಸಿ ಬಡ ಮಹಿಳೆಗೆ ಹಸ್ತಾಂತರಿಸಿದರು. ಅವರು ಮಾತನಾಡಿ ಸಮಾಜದಲ್ಲಿ ಎಲ್ಲರೂ ಒಂದೇ. ನುಸ್ರತ್ ಸಂಸ್ಥೆಯವರು ಮಾಡಿದ ಕೆಲಸ ದೇವರು ಮೆಚ್ಚುವಂತ ಕೆಲಸ ಇಂತಹ ಸಂಸ್ಥೆಗಳು ಊರಿನ ಅಭಿವೃದ್ಧಿಯಾಗೆ ಅನಿವಾರ್ಯ. ಪಂಚಾಯತ್ ಕೊಟ್ಟ ಅನುದಾನಕ್ಕೆ ಕೈಜೋಡಿಸಿ ಬಡ ಮಹಿಳೆಗೆ ಸುಂದರ ಮನೆ ನಿರ್ಮಿಸಿ ಕೊಟ್ಟಿದ್ದಿರಿ ನಿಮ್ಮ ಸಮಾಜಮುಖಿ ಕೆಲಸಗಳಿಗೆ ಸಮಾಜಕ್ಕೆ ಮಾದರಿಯಾಗಲಿ ಎಂದವರು ಹೇಳಿದರು.

ನೆಲ್ಲೂರು ಕೆಮ್ರಾಜೆ ಗ್ರಾ.ಪಂ ಅಧ್ಯಕ್ಷ ಧನಂಜಯ ಕುಮಾರ್, ಎಲಿಮಲೆ ಬದ್ರಿಯಾ‌ ಜುಮ್ಮಾ‌ ಮಸೀದಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ, ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಹರ್ಲಡ್ಕ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ ಸದಸ್ಯ ವೇಣುಗೋಪಾಲ ಪುನ್ಕುಟಿ, ನಿವೃತ್ತ ಎಸೈ ಕೃಷ್ಣಯ್ಯ, ತರ್ಭಿಯತ್ ಅಧ್ಯಕ್ಷ ಪೈಝಲ್,ಎಲಿಮಲೆ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮೂಸಾಹಾಜಿ ಎಲಿಮಲೆ,ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಜಿರ್ಮಖಿಯಲ್ಲಿ ನೆಲೆಸಿ ಪ್ರಸ್ತುತ ಕ್ಯಾಲಿಕಟ್ ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಶಾಜಿದಾ,ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿರ್ಮುಖಿ ಜುಮ್ಮಾ ಮಸೀದಿ ಅಧ್ಯಕ್ಷ ಜಿ.ಎಸ್ ಅಬ್ದುಲ್ಲಾ ಸಭಾ ಕಾರ್ಯದ ಅಧ್ಯಕ್ಷತೆ ವಹಿಸಿದ್ದರು. ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News