×
Ad

ಸುರತ್ಕಲ್ ಎಸ್ಸೆಸ್ಸೆಫ್ ನಿಂದ ಅನುಸ್ಮರಣಾ ಸಂಗಮ, ಗ್ರ್ಯಾಂಡ್ ಬುರ್ದಾ ಮಜ್ಲಿಸ್

Update: 2024-02-12 22:56 IST

ಸುರತ್ಕಲ್: ಎಸ್ಸೆಸ್ಸೆಫ್ ಸುರತ್ಕಲ್ ಯೂನಿಟ್ ವತಿಯಿಂದ ಅನುಸ್ಮರಣಾ ಸಂಗಮ ಹಾಗೂ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಸುರತ್ಕಲ್ ಮುಹಿಯುದ್ದೀನ್ ಜುಮಾ ಮಸೀದಿ ವಠಾರದ ತಾಜುಲ್ ಉಲಮಾ ವೇದಿಕೆಯಲ್ಲಿ ಸೋಮವಾರ ರಾತ್ರಿ ನಡೆಯಿತು.

ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರಗಯದರ್ಶಿ ಇನಾಯತ್ ಅಲಿ, ಎಸ್ಸೆಸ್ಸೆಫ್ ಯುವಕ ರನ್ನು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಂಘಟಿಸಿ ಅವರಲ್ಲಿ ಜ್ಞಾನದ ಜೊತೆಗೆ ದೀನಿನ‌ ಪರಿದಿ ಯನ್ನು ತಿಳಿಸಿಕೊಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ವೈ. ಇಸ್ಮಾಯೀಲ್ ಸ ಅದಿ, ಇಂದಿನ ಕಾಲದಲ್ಲಿ ಮಸ್ಲಿಂ ಸಮುದಾ ಯದ ಯುವಕರು ಅಮಲು ಪದಾರ್ಥಗಳು, ಯುವತಿಯರ ಹಿಂದೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸದಿಂದ ವಿಮುಖರಾಗುತ್ತಿ ದ್ದಾರೆ. ಹಾಗಾಗಿ ಹೆತ್ತವರು ತಮ್ಮ ಮಕ್ಕಳು ಮನೆಯಿಂದ ಹೊರಗೆ ಕಳುಹಿಸುವಾಗ ಗಮನಹರಿಸಬೇಕಿದೆ. ಎಲ್ಲ ಯುವಕರನ್ನು ವಿದ್ಯಾಭ್ಯಾಸದತ್ತ ಮುಖಮಾಡುವಂತೆ ಮಾಡುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ನುಡಿದರು.

ಕಣ್ಣಂಗಾರ್ ಎಸ್.ಎಸ್. ರೋಡ್ ನ ತ್ವಾಹಾ ಮಸೀದಿಯ ಇಮಾಮ್ ಕೆ.ಎಂ. ಮುಹಮ್ಮದ್ ರಫೀಕ್ ಕಾಮಿಲ್ ಸಖಾಫಿ ದುಆ ನೆರವೇರಿಸಿದರು. ಅನುಸ್ಮರಣಾ ಭಾಷಣವನ್ನು ಉಮರುಲ್ ಫಾರೂಕ್ ಸಖಾಫಿ ಅಲ್ ಹಿಕಮಿ ಕಾಟಿಪಳ್ಳ ನಡೆಸಿ ದರು. ಅಸ್ಸಯ್ಯಿದ್ದ ತ್ವಾಹಾ ತಂಙಳ್ ಪೂಕೊಟ್ಟೂರು ಮತ್ತು ಸಂಗಡಿಗರಿಂದ ಗ್ರ್ಯಾಂಡ್ ಬುರ್ದಾ ಮಜ್ಲಿಸ್ ನಡೆಯಿತು.

ಸಮಾರಂಭದಲ್ಲಿ ಕೆಪಿಸಿಸಿ ಪ್ರಧಾನ‌ ಕಾರ್ಯದರ್ಶಿ ಇನಾಯತ್ ಅಲಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ಸೈಫುದ್ದೀನ್, ಸುರತ್ಕಲ್ ಗೌಸಿಯಾ ಕಾಂಫ್ಲೆಕ್ಸ್, ಎಂಜೆಎಂ, ಇಜೆಎಂ ಅಧ್ಯಕ್ಷ ಹಾಜಿ ಮುಸ್ತಫಾ ಎಸ್.ಕೆ., ಸುರತ್ಕಲ್ ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಐ. ಯಾಕೂಬ್, ಎಸ್.ವೈ.ಎಸ್. ದ.ಕ. ಇಸಾಬ ಕಾರ್ಯದರ್ಶಿ ಸಿ.ಎಂ. ಫಾರೂಕ್ ಶೇಡಿಗುರಿ, ಎಸ್ಸೆಸ್ಸೆಫ್ ಸುರತ್ಕಲ್ ಸೆಕ್ಟರ್ ಅಧ್ಯಕ್ಷ ಝಕರಿಯಾ ಹಿಮಮಿ ಸಖಾಫಿ, ಜೀಲಾನಿ ಗ್ರೂಪ್ ಮಾಲಕ ಮುಹಮ್ಮದ್ ಅಲಿ ತಡಂಬೈಲ್, ಇಡ್ಯಾ ಖಿಳ್ ರಿಯಾ ಮಸೀದಿಯ ಅಧ್ಯಕ್ಷ ಇಲ್ಯಾಸ್ ಇಡ್ಯಾ, ಸುರತ್ಕಲ್ ಎಎಂಬಿಒಎಸ್ ಅಧ್ಯಕ್ಷ ಮುಹಮ್ಮದ್ ಸಾಸಿರ್, ಎಸ್ಸೆಸ್ಸೆಫ್ ಸುರತ್ಕಲ್ ಯೂನಿಟ್ ಅಧ್ಯಕ್ಷ ಉಮರ್ ಫಾರೂಕ್, ಸ್ವಾಗತ‌ ಸಮಿತಿಯ ಅಧ್ಯಕ್ಷ ಝುಲ್ಫಿಕರ್ ಅಲಿ, ಸಂಚಾಲಕ ಅಡ್ವಕೇಟ್ ಜೀಶಾನ್, ಕೋಶಾಧಿಕಾರಿ ಬಶೀರ್, ಪಿ.ಎಸ್. ಮುಹಮ್ಮದ್ ಕಾಮಿಲ್ ಸಖಾಫಿ, ಹಾಫಿಲ್ ಮೊಹಿನುದ್ದೀನ್ ಅಂಜದಿ, ಸಿದ್ದೀಕ್ ನಿಝಾಮಿ, ಅಲಿ ಸಅದಿ, ಝಿಯಾನ್ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಸುರತ್ಕಲ್ ಯೂನಿಟ್ ನ ಸದಸ್ಯ ಮುಸ್ತಫಾ ಸುರತ್ಕಲ್ ಸ್ವಾಗತಿಸಿದರು‌. ಕಾರ್ಯಕ್ರಮಕ್ಕೂ ಮುನ್ನ ಬದ್ರಿಯಾ ದಫ್ ತಂಡ ಕೃಷ್ಣಾಪುರ ಇವರಿಂದ ದಫ್ ಕಾರ್ಯಕ್ರಮ ನಡೆಯಿತು.






Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News