ಮೂಡುಬಿದಿರೆ: ಮುಹಮ್ಮದ್ ಇಸ್ಮಾಯೀಲ್ ರಾವ್ತರ್ ನಿಧನ
Update: 2024-02-13 22:36 IST
ಮೂಡುಬಿದಿರೆ: ಹಿರಿಯ ಸಾರಿಗೆ ಉದ್ಯಮಿ, ಮಿಸ್ಬಾ ಟ್ರಾನ್ಸ್‌ಪೋರ್ಟ್ ಮಾಲಕ, ಮುಹಮ್ಮದ್ ಇಸ್ಮಾಯೀಲ್ ರಾವ್ತರ್ ಮೂಡುಬಿದಿರೆ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಅವರು ಪತ್ನಿ, ಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರು ಸಾರಿಗೆ ಉದ್ಯಮದಲ್ಲಿ ದಶಕಗಳ ಅನುಭವ ಹೊಂದಿದ್ದವರಾಗಿದ್ದಾರೆ.
ಹೊಸ್ಮಾರು ಶೈಖ್ ಮುಹ್ಯಿಯುದ್ದೀನ್ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ) ಸಂಘವು ಮೃತರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದೆ.