ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ರನ್ನು ಭೇಟಿಯಾದ ಕೇರಳದ ಕಲಾರಿ ಸಂಸ್ಥೆಯ ಗುರುಗಳು
ಮಂಗಳೂರು : ಕೇರಳ ರಾಜ್ಯದ ತ್ರಿಸೂರ್ ಜಿಲ್ಲೆಯ ಯಲವಲ್ಲಿ ಗ್ರಾಮದಲ್ಲಿ ಶ್ರೀ ಗುರುಕುಲಂ ಕಲಾರಿ ಸಂಸ್ಥೆಯು ನಡೆಸುವ ಪ್ರಾಚೀನ ಕಲೆಯಾದ ಕಳರಿಪಯಟ್ಟು, ಕಲಾರಿ ಮರ್ಮ ಚಿಕಿತ್ಸೆ ಮತ್ತು ಕಲಾರಿ ಯೋಗ ಚಿಕಿತ್ಸೆ ಯೋಗ ಪದ್ಧತಿಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವಲ್ಲಿ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಚಿಕಿತ್ಸಕರು ಹಾಗೂ ಗುರುಗಳು ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ರನ್ನು ಗುರುವಾರ ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾದರು.
ತಮ್ಮನ್ನು ಭೇಟಿಯಾದ ಶ್ರೀ ಗುರುಕುಲಂ ಕಲಾರಿ ಸಂಸ್ಥೆಯ ಚಿಕಿತ್ಸಕರು ಹಾಗೂ ಗುರುಗಳಾದ ಆಂಟೋನಿ ಗುರುಕಲ್ , ವಿಜೇಶ್, ರವಿ, ರೋಷನ್ ಮತ್ತು ಗೀತಾ ಅವರನ್ನು ಸ್ಪೀಕರ್ ಯು.ಟಿ. ಖಾದರ್ ತಮ್ಮ ಕಚೇರಿಯಲ್ಲಿ ಸನ್ಮಾನಿಸಿದರು.
ರಾಜ್ಯ ಗೃಹ ಸಚಿವ ಡಾ. ಜಿ.ಪರಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಡಾ.ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್ ಕೆ, ಅರವಿಂದ ಕುಮಾರ್ ಅರಳಿ ಉಪಸ್ಥಿತರಿದ್ದರು ಎಂದು ವಿಧಾನಸಭಾಧ್ಯಕ್ಷರ ಕಚೇರಿ ಪ್ರಕಟನೆ ತಿಳಿಸಿದೆ.