×
Ad

ಯುನಿವೆಫ್ ನಿಂದ ರಮಝಾನ್ ಸ್ವಾಗತ ಕಾರ್ಯಕ್ರಮ

Update: 2024-03-08 14:49 IST

ಮಂಗಳೂರು, ಮಾ.8: ಯುನಿವೆಫ್ ಕರ್ನಾಟಕದ ವತಿಯಿಂದ ರಮಝಾನ್ ಸ್ವಾಗತ ಕಾರ್ಯಕ್ರಮವು ಕಂಕನಾಡಿಯ ಜಂ ಇಯ್ಯತುಲ್ ಫಲಾಹ್ ಹಾಲ್ ನಲ್ಲಿ ಜರುಗಿತು.

'ರಮಝಾನ್ ಪಾಪ ವಿಮೋಚನೆಯ ತಿಂಗಳು' ಎಂಬ ವಿಷಯದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ, 'ಮನುಷ್ಯ ತನ್ನನ್ನು ತಾನು ಪರಿಶುದ್ಧಗೊಳಿಸಿ ದೇವ ಸಾಮೀಪ್ಯವನ್ನು ಗಳಿಸಲು ಇರುವ ಸದವಕಾಶವಾಗಿದೆ ರಮಝಾನ್ ಎಂದು ಹೇಳಿದರು.

ಅತೀಕುರ್ರಹ್ಮಾನ್ ಕಿರಾಅತ್ ಪಠಿಸಿದರು.

ವಕಾಝ್ ಅರ್ಸಲನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಬೈದುಲ್ಲಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಕಾರ್ಯಕ್ರಮ ಸಂಚಾಲಕ ಮುಹಮ್ಮದ್ ಆಸಿಫ್ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News