×
Ad

ಕಾರ್ಪೊರೇಟ್ ಹಿಂದುತ್ವದ ದುಷ್ಟಕೂಟವನ್ನು ಸೋಲಿಸದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ: ಸುನಿಲ್ ಕುಮಾರ್ ಬಜಾಲ್

Update: 2024-03-28 17:22 IST

ಮಂಗಳೂರು: ಹತ್ತು ವರ್ಷದಲ್ಲಿ ದೇಶದ ಜನರಿಗೆ ಮಂಕುಬೂದಿ ಎರಚಿ, ಹಲವು ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿ ಕಾರ ನಡೆಸಿದ ನರೇಂದ್ರ ಮೋದಿ ನೇತೃತ್ವದ ಸರಕಾರ ಎಲ್ಲಾ ವಿಭಾಗದ ಜನತೆಗೆ ಮೋಸ ಮಾಡಿ ಕೋಟ್ಯಂತರ ಹಣ ವನ್ನು ಚುನಾವಣಾ ಬಾಂಡ್ ಹೆಸರಿನಲ್ಲಿ ಲಪಟಾಯಿಸಿ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಕಾರ್ಪೊರೇಟ್ ಹಿಂದುತ್ವದ ದುಷ್ಟಕೂಟವನ್ನು ದೇಶದ ಜನತೆ ಒಂದಾಗಿ ಸೋಲಿಸದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಹೇಳಿದರು.

ಉಳ್ಳಾಲ ತಾಲೂಕು ಮಟ್ಟದ ಸಿಪಿಎಂ ಸ್ಥಳೀಯ ಶಾಖಾ ಕಾರ್ಯದರ್ಶಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಿಪಿಎಂ ನಾಯಕ ಕೃಷ್ಣಪ್ಪ ಸಾಲಿಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ತಾಲೂಕು ಕಾರ್ಯದರ್ಶಿ ಯು.ಜಯಂತ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಪದ್ಮಾವತಿ ಶೆಟ್ಟಿ, ಸುಂದರ ಕುಂಪಲ, ಲೋಕಯ್ಯ ಪನೀರ್, ವಿಲಾಸಿನಿ ತೊಕ್ಕೊಟ್ಟು, ರೋಹಿದಾಸ್, ಚಂದ್ರಹಾಸ ಪಿಲಾರ್, ಜಯಂತ ಅಂಬ್ಲಮೊಗರು, ಶೇಖರ್ ಕುಂದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News