×
Ad

ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಅರ್ಹ ಫಲಾನುಭವಿಗಳಿಗೆ ಅಕ್ಕಿ ವಿತರಣೆ

Update: 2024-03-28 17:24 IST

ಉಳ್ಳಾಲ: ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ವತಿಯಿಂದ ಮಹತ್ತರ ಸೇವೆ ಮಾಡಿದ್ದೇವೆ.ಸಂಸ್ಥೆ ಹುಟ್ಟು ಹಾಕಿದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ ಆಗಿದೆ.ಅದನ್ನು ನಾವು ಮಾಡುತ್ತಿದ್ದೇವೆ ಎಂದು ಅಧ್ಯಕ್ಷ ಇಸ್ಮಾಯಿಲ್ ಶಾಫಿ ಬಬ್ಬುಕಟ್ಫೆ ಹೇಳಿದರು.

ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಇದರ ಆಶ್ರಯದಲ್ಲಿ ಮಾಸ್ತಿಕಟ್ಟೆ ಯಲ್ಲಿ ಇರುವ ಸಂಘಟನೆ ಕಚೇರಿಯಲ್ಲಿ ನಡೆದ ರಂಝಾನ್ ಅಕ್ಕಿ ವಿತರಣೆ, ನಾಗರಿಕ ಸೇವಾ ಕೇಂದ್ರ ಉದ್ಘಾಟನೆ ಹಾಗು ಮರ್ಹೂಮ್ ಅನ್ವರ್ ಹುಸೇನ್ ರವರ ಸಂತಾಪ ಸೂಚನೆ ಕಾರ್ಯಕ್ರಮ ದಲ್ಲಿ ಮಾತನಾಡಿದರು

ಪ್ರಧಾನ ಕಾರ್ಯದರ್ಶಿ ಯು.ಕೆ. ಮೊಹಮ್ಮದ್ ಮುಸ್ತಫಾ ಮಂಚಿಲ ದುಆ ನೆರವೇರಿಸಿ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.‌ ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಸಾಧೀಕ್ ಕಲ್ಲಾಪು ಅವರನ್ನು ಸನ್ಮಾನಿಸಲಾಯಿತು. ನಾಗರಿಕ ಸೇವಾ ಕೇಂದ್ರ ವನ್ನು ಲೋಕಾರ್ಪಣೆ ಗೊಳಿಸಲಾಯಿತು.

ಕಾರ್ಯಕ್ರಮ ದಲ್ಲಿ ಕೋಶಾಧಿಕಾರಿ ಹಾಜಿ ಅಹ್ಮದ್ ಬಾವ ಕುಂಬ್ಳೆ, ಟ್ರಸ್ಟಿಗಳಾದ ಯು ಎಚ್ ಸಿದ್ದೀಕ್, ಬಿ.ಎ.ಮೊಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News