×
Ad

ಉಜಿರೆ: ಮರ ಬಿದ್ದು ಮೂರು ವಾಹನಗಳು ಜಖಂ

Update: 2024-06-24 17:30 IST

‌ಬೆಳ್ತಂಗಡಿ; ಉಜಿರೆ ಪೇಟೆಯ ಸಮೀಪ ಮರವೊಂದು ಹೆದ್ದಾರಿಗೆ ಬುಡ ಸಮೇತ ಉರುಳಿ ಬಿದ್ದು ಮೂರು ವಾಹನಗಳು ಜಖಂಗೊಂಡು ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಸೋಮವಾರ ಸಂಭವಿಸಿದೆ.

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆಯೇ ಮರ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ರಜ್ಜು ಗುಜ್ಜಾಗಿದ್ದು ರಿಕ್ಷಾ ಚಾಲಕ ಉಜಿರೆ ಹಳೆಪೇಟೆಯ ರತ್ನಾಕರ(50) ಹಾಗೂ ಪ್ರಯಾಣಿಕ ಹಳೆಪೇಟೆಯ ಸಾಂತಪ್ಪ(47) ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮರ ಬೀಳುವ ವೇಳೆ ಎರಡು ಕಾರುಗಳಿಗೂ ಹಾನಿಯಾಗಿದೆ. ಘಟನೆಯಿಂದ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯ ಉಂಟಾಗಿ ಇಕ್ಕೆಲಗಳಲ್ಲಿ ಮೂರು ಕಿಮೀ.ಗಿಂತ ಅಧಿಕ ದೂರದವರೆಗೆ ವಾಹನಗಳ ಸಾಲು ಕಂಡು ಬಂತ. ಉಜಿರೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಮೆಸ್ಕಾಂ,ಚಾಲಕರು ಹಾಗೂ ಸ್ಥಳೀಯರು ಮರ ತೆರವಿಗೆ ಸಹಕರಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News