ಬೋಳಿಯಾರು ಪ್ರಕರಣ: ಆರೋಪಿಗೆ ಜಾಮೀನು
Update: 2024-07-25 22:02 IST
ಮಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರು ಎಂಬಲ್ಲಿ ಜೂನ್ 9ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕನೇ ಆರೋಪಿ ಅಬೂಬಕ್ಕರ್ ಸಿದ್ದೀಕ್ ಕುಕ್ಕೋಟ್ ಎಂಬಾತನಿಗೆ ರಾಜ್ಯ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ನ್ಯಾಯಾಧೀಶೆ ಎಂಜಿ ಉಮಾ ಅವರಿರುವ ಏಕ ಸದಸ್ಯ ಪೀಠವು ಜಾಮೀನು ಮಂಜೂರು ಮಾಡಿದೆ. ಆರೋಪಿಯ ಪರವಾಗಿ ನ್ಯಾಯವಾದಿ ಅಲೀಮಾ ಅಮಿನ್ ವಾದ ಮಂಡಿಸಿದ್ದು, ಯುವ ನ್ಯಾಯವಾದಿಗಳಾದ ಹರ್ಷದ್ ಎಂಪಿ ಮತ್ತು ಅಫೀಝ್ ಸಜಿಪ ಸಹಕರಿಸಿದ್ದರು.