×
Ad

ವಿಮೆನ್ ಇಂಡಿಯಾ ಮೂವ್ಮೆಂಟ್‌ನ ರಾಜ್ಯ ಸಮಿತಿ ಸಭೆ

Update: 2024-09-23 17:41 IST

ಮಂಗಳೂರು, ಸೆ.23: ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯದ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮಹಿಳಾ ಭದ್ರತೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು, ನಿಂದನಾತ್ಮಕ ಹೇಳಿಕೆ ನೀಡಿದ ನ್ಯಾಯಾಧೀಶರನ್ನು ಅಮಾನತುಗೊಳಿಸಬೇಕು. ಪೌರ ಕಾರ್ಮಿಕರ ಭದ್ರತೆಗೆ ವಿಶೇಷ ಮಾರ್ಗಸೂಚಿ ರಚಿಸಬೇಕು ಎಂದು ಸಭೆ ಆಗ್ರಹಿಸಿದೆ.

ಸಭೆಯಲ್ಲಿ ವಿಮ್ ಉಪಾಧ್ಯಕ್ಷೆ ಶಾಝಿಯಾ ಬೆಂಗಳೂರು, ಕಾರ್ಯದರ್ಶಿ ಸಈದಾ, ರಾಜ್ಯ ಸಮಿತಿ ಸದಸ್ಯೆಯರು ಉಪಸ್ಥಿತ ರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿದರು. ರಾಜ್ಯ ಕೋಶಾಧಿಕಾರಿ ರಿಹಾನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News