×
Ad

Mangaluru | ಡಿ.28ರಂದು ಅಡ್ಯಾರ್‌ನಲ್ಲಿ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ

ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾದ ಶತಮಾನೋತ್ಸವ

Update: 2025-12-26 22:48 IST

ಮಂಗಳೂರು: ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ಇದರ ಶತಮಾನೋತ್ಸವ ಅಂಗವಾಗಿ ಕೈಗೊಳ್ಳಲಾದ ಶತಾಬ್ದಿ ಸಂದೇಶ ಯಾತ್ರೆಯ ಸಮಾರೋಪ ಮಹಾ ಸಮ್ಮೇಳನ ಡಿ.28 ರಂದು ಸಂಜೆ 4 ಗಂಟೆಗೆ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಪ್ರಮುಖರಾದ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

1926ರಲ್ಲಿ ಸ್ಥಾಪನೆಗೊಂಡ ಸಮಸ್ತ ಕೇಂದ್ರೀಯ ಜಂಇಯ್ಯತುಲ್ ಉಲಮಾ ವಿದ್ವಾಂಸ ಸಭೆಯ ನೂರು ವರ್ಷ ಪೂರೈಸಿದ ಶತಾಬ್ಬಿಯ ಮಹಾ ಸಮ್ಮೇಳನವು ಮುಂದಿನ ವರ್ಷ 2026 ಫೆಬ್ರವರಿ 4, 5, 6, 7, 8 ದಿವಸಗಳಲ್ಲಿ ಬಹಳ ಅದ್ದೂರಿಯಾಗಿ ಕಾಸರಗೋಡಿನ ಕುಣಿಯದಲ್ಲಿ ಜರಗಲಿದೆ ಎಂದರು.

2024 ಜನವರಿ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮ್ಮೇಳನದ ಪ್ರಚಾರದ ಉದ್ಘಾಟನಾ ಸಮ್ಮೇಳನವು ನಡೆದಿದೆ. ಅಧ್ಯಕ್ಷ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ ಶತಾಬ್ದಿ ಸಂದೇಶ ಯಾತ್ರೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ತಮಿಳುನಾಡಿನ ಕನ್ಯಾಕುಮಾರಿ ನಾಗರಕೋವಿಲ್‌ನಿಂದ ಆರಂಭಗೊಂಡ ಯಾತ್ರೆಯು ತಿರುವನಂತಪುರಂ, ಕೊಲ್ಲಂ, ಪತ್ತನಮ್‌ತಿಟ್ಟ, ಕೋಟ್ಟಯಂ, ಆಲಪ್ಪುಯ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ತಿರೂರ್, ಮಲಪ್ಪುರಂ, ಪಾಲಕ್ಕಾಡ್, ಗೂಡಲ್ಲೂರು, ವಯನಾಡ್, ಕಣ್ಣೂರು, ಕಾಸರಗೋಡು ಪ್ರಮುಖ ಕೇಂದ್ರಗಳಲ್ಲಿ ಸಾಗಿ ಬಂದು 28 ರಂದು ಸಂಜೆ 4:00 ಗಂಟೆಗೆ ಮಂಗಳೂರಿನ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಸಮಾಪ್ತಿಯಾಗಲಿದೆ ಎಂದು ವಿವರಿಸಿದರು.

ತಮಿಳುನಾಡು, ಕೇರಳ ಹಾಗೂ ಕರ್ನಾಟಕ ಸೇರಿ ಒಟ್ಟು 18 ಪ್ರಮುಖ ಕೇಂದ್ರಗಳಲ್ಲಿ ಸಾಗಿ ಒಂದು ಸಾವಿರ ಕಿಲೋ ಮೀಟರ್‌ಗಳಿಗಿಂತಲೂ ಹೆಚ್ಚು ದೂರವನ್ನು ಯಾತ್ರೆಯು ಕ್ರಮಿಸಲಿದೆ. ಪ್ರಮುಖ ಕೇಂದ್ರಗಳಲ್ಲಿ ಸಂದೇಶ ಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಸಮ್ಮೇಳನವು ನಡೆಯುತ್ತಿದೆ. ಆದರ್ಶಪ್ರಚಾರ, ಸಾಮಾಜಿಕ ಮತ್ತು ಶೈಕ್ಷಣಿಕ ಅರಿವು ಮತ್ತು ಜಾಗೃತಿ, ಸಮುದಾಯದ ಸಬಲೀಕರಣ, ಮೌಲ್ಯಗಳ ರಕ್ಷಣೆ, ಸೌಹಾರ್ದಮತ್ತು ದೇಶಪ್ರೇಮ, ಮಾನವೀಯ ಸೇವೆ ಹಾಗೂ ಭಾರತೀಯ ಜಾತ್ಯತೀತ ಪರಂಪರೆಯನ್ನು ಬಲಪಡಿಸುವ ವಿವಿಧ ಕಾರ್ಯಯೋಜನೆಗಳೊಂದಿಗೆ ಸಂದೇಶ ಯಾತ್ರೆಯು ಮುನ್ನಡೆಯುತ್ತಿದೆ.

ಸೂಕ್ತ ಪಾರ್ಕಿಂಗ್ ವ್ಯವಸ್ಥೆ : ಕಾರ್ಯಕ್ರಮವು ಸುಸೂತ್ರವಾಗಿ ನಡೆಯುವ ಸಲುವಾಗಿ ಉನ್ನತ ಮಟ್ಟದ ಅಧಿಕಾರಿಗಳ ಸಲಹೆ ಪಡೆದು ಪಾರ್ಕಿಂಗ್ ಮತ್ತು ಸ್ವಚ್ಚತಾ ಕಾರ್ಯಗಳ ಬಗ್ಗೆ ಸಿದ್ದತೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.

ಬಿ.ಸಿ.ರೋಡ್ ಭಾಗದಿಂದ ಬರುವವರು ಬೀಡು ಬಡಿಲ ಗ್ರಾಂಡ್, ಇಂಡಿಯನ್ ಚಿಕನ್ ಬಳಿ ಮಜೀದ್ ಕೆ.ಎಸ್ ಗ್ರಾಂಡ್, ಇಂಡಿಯನ್ ಚಿಕನ್ ಹಿಂದುಗಡೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನ ಮೈದಾನದ ಹಿಂದುಗಡೆ ಮೈದಾನವನ್ನು ವಿಶೇಷ ಅತಿಥಿಗಳಿಗೆ ಮೀಸಲಿಡಲಾಗಿದೆ. ಮಂಗಳೂರು ಕಡೆಯಿಂದ ಬರುವವರಿಗೆ ಬೀಡು ಮಸೀದಿ ಎದುರುಗಡೆ, ಬೀಡು ನಸೀಮ ಕಟ್ಟಡದ ಹಿಂದುಗಡೆ, ಗಾಣದಬೆಟ್ಟು ಕೇಂದ್ರ ಜುಮಾ ಮಸೀದಿ ಅಡ್ಯಾರ್ ಕಣ್ಣೂರು ಎದುರುಗಡೆ, ಮೇನಾಲ ಗಾಣದ ಬೆಟ್ಟು ಬಳಿ, ರಾಜೇಶ್ ಮೈದಾನ ಗಾಣದ ಬೆಟ್ಟು ಮೈದಾನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಟ್ಟು ಐದು ಮೈದಾನಗಳಲ್ಲಿ ವಾಹನಗಳಿಗೆ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ವರ್ಣರಂಜಿತ ಸ್ವಾಗತಕ್ಕೆ ಸಜ್ಜು: ಯಾತ್ರಾ ನಾಯಕರಾದ ಸೆಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳರನ್ನು ಆಮಿಲ, ,ಖಿದ್ಮ , ವಿಖಾಯ ಇದರ ತಲಾ 111, ಸದಸ್ಯರ ತಂಡ, ಆಯ್ದ ದಫ್ ಹಾಗೂ ಸೈಟ್ ತಂಡ, ನೊಂದಾಯಿತ ಮುಅಲ್ಲಿಂ, ಮುತಅಲ್ಲಿಮರು ಹಾಗೂ ಉಲಮಾ ಉಮರಾ ನಾಯಕರ ತಂಡ ಸ್ವಾಗತಿಸಲಿದ್ದಾರೆ.

ಯಾತ್ರೆಯ ಮಾರ್ಗ: ತಲಪಾಡಿಯಲ್ಲಿ ಯಾತ್ರಾ ನಾಯಕರು ಹಾಗೂ ತಂಡವನ್ನು ಕರ್ನಾಟಕಕ್ಕೆ ಸಾಂಕೇತಿಕವಾಗಿ ಸ್ವಾಗತಿಸಲಾಗುತ್ತದೆ. ಕೆ.ಸಿ ರೋಡು ನಾಟಿಕಲ್ ಮಾರ್ಗವಾಗಿ ಮೆಲ್ಕಾರ್ ಮೂಲಕ ಸಾಗಿ ಅಡ್ಯಾರ್ ತಲುಪಲಿದೆ. ನೊಂದಾಯಿತ ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.

313 ಸ್ವಯಂ ಸೇವಕರು ಸಜ್ಜು : 313 ಸ್ವಯಂ ವಿಖಾಯ ಸ್ವಯಂ ಸೇವಕರು ಈಗಾಗಲೇ ತಯಾರಾಗುತ್ತಿದ್ದು ಅವರಿಗೆ ಪೋಲೀಸ್ ಅಧಿಕಾರಿಗಳಿಂದ ವಿಶೇಷ ತರಬೇತಿಯೂ ಲಭ್ಯವಾಗಲಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ, ರಸ್ತೆ ತಡೆಯಾಗದಂತೆ ಪೂರ್ಣ ಕಾಳಜಿ ವಹಿಸಲಾಗುವುದು ಎಂದು ವಿವರಿಸಿದರು.

ಸಭಾ ಕಾರ್ಯಕ್ರಮ : ಸಂಜೆ 3:00 ರಿಂದ ಮದ್ರಸ ಅಧ್ಯಾಪಕರ ಸಂಗಮ, ಸಂಜೆ 4:00 ರಿಂದ ಶತಾಬ್ದಿ ಸಂದೇಶದ ಸಮಾರೋಪ ಸಭಾ ಕಾರ್ಯಕ್ರಮ ನಡೆಯಲಿದೆ. ಬಿ ಕೆ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಪೀಕರ್ ಯುಟಿ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಎಂದು ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಮುಖರಾದ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಅನೀಸ್ ಕೌಸರಿ ಕುಂಬ್ರ ಸಯ್ಯಿದ್ ಅಮೀರ್ ತಂಳ್ ಕಿನ್ಯ, ಕಾಸಿಮ್ ದಾರಿಮಿ ನಂದಾವರ, ತಾಜುದ್ದೀನ್ ರಹ್ಮಾನಿ, ಇಬ್ರಾಹೀಂ ದಾರಿಮಿ ಕಡಬ, ಮುಹಮ್ಮದ್ ಮುಸ್ಲಿಯಾರ್ ಮುಂಡೋಲೆ, ಮುಹಮ್ಮದ್ ಸಾಗರ್ ಮಿತ್ತಬೈಲ್, ಅಬ್ದುಲ್ ರಶೀದ್ ರಹ್ಮಾನಿ, ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಶಮೀರ್ ಅಡ್ಡೂರು, ಇಸ್ಮಾಯಿಲ್ ಯಮಾನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News