×
Ad

ಮಂಗಳೂರು: ಕಾರಿನಲ್ಲಿ ಬೆಂಕಿ ಅವಘಡ

Update: 2025-01-01 23:12 IST

ಸಾಂದರ್ಭಿಕ ಚಿತ್ರ

ಮಂಗಳೂರು, ಜ.1: ನಗರದ ಮೇರಿಹಿಲ್ ಹೆಲಿಪ್ಯಾಡ್‌ಗೆ ಹೋಗುವ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.

ಚಾಲಕ ಕಾರನ್ನು ತಕ್ಷಣ ನಿಲ್ಲಿಸಿ ಅದರಲ್ಲಿದ್ದ ಇತರ ಮೂವರನ್ನು ಕೂಡ ಕೆಳಗಳಿಸಿದ್ದಾರೆ. ಅಲ್ಲದೆ ಅಕ್ಕಪಕ್ಕದಲ್ಲಿದ್ದವರು ನೀರು ಸುರಿದು ಬೆಂಕಿ ನಿಯಂತ್ರಿಸಿದರು. ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಯೂ ಕಾರ್ಯಾಚರಣೆ ನಡೆಸಿದರು.

ಕಾರಿನ ಇಂಜಿನ್ ಭಾಗಶಃ ಸುಟ್ಟು ಹೋಗಿದೆ. ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದೆಂದು ಅಗ್ನಿಶಾಮಕ ದಳದ ಅಧಿಕಾರಿಗಳು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News