ಮಲಾರ್ ಯಾದ್ ಫೌಂಡೇಶನ್‌ನಿಂದ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ
ಕೊಣಾಜೆ : ಪಾವೂರು ಗ್ರಾಮದ ಯಾದ್ ಫೌಂಡೇಶನ್ ಮಲಾರ್ ವತಿಯಿಂದ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ಸೋಮವಾರ ಮಲಾರ್ ಜಂಕ್ಷನ್‌ನಲ್ಲಿ ನಡೆಯಿತು.
ಆಧ್ಯಾತ್ಮಿಕ ಸಂಗಮದ ನೇತೃತ್ವವನ್ನು ವಲಿಯುದ್ದೀನ್ ಫೈಝಿ ಉಸ್ತಾದ್ ವಹಿಸಿದ್ದರು. ಸಯ್ಯದ್ ಅಮೀರ್ ತಂಙಳ್ ಕಿನ್ಯ ದುಆಗೈದರು. ಸಯ್ಯದ್ ಶರಪುದ್ದಿನ್ ತಂಳ್ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅಜ್ಮೀರ್ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಸಯ್ಯದ್ ಇಜಾಝ್ ಹುಸೈನ್ ಜಿಸ್ತಿ ಅಜ್ಮೀರ್, ನೈಶ್ ಕಾಲೇಜು ಬೆಂಗಳೂರು ಇದರ ಅಧ್ಯಕ್ಷ ಯು.ಟಿ. ಝುಲ್ಫಿಕರ್ ಫರೀದ್, ಉದ್ಯಮಿ ಹಮೀದ್ ಕಣ್ಣೂರು, ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಉದ್ಯಮಿ ಗಳಾದ ಸಿಎಂ ಫಾರೂಕ್, ಬಶೀರ್ ಜೋಕಟ್ಟೆ, ಎನ್‌ಎಸ್ ಕರೀಂ, ರಹ್ಮಾನ್ ಕೋಡಿಜಾಲ್, ಬಿ.ಕೆ. ಅಬ್ದುಲ್ ಜಬ್ಬಾರ್, ಅಬ್ದುಲ್ ಶುಕೂರ್, ಝಕರಿಯಾ ಮಲಾರ್, ಪತ್ರಕರ್ತರಾದ ಹಂಝ ಮಲಾರ್, ಅನ್ಸಾರ್ ಇನೋಳಿ, ಸ್ಥಳೀಯ ಮಸೀದಿಗಳ ಅಧ್ಯಕ್ಷರಾದ ಎಂ.ಪಿ. ಅಬ್ದುಲ್ ರಹ್ಮಾನ್, ಅಬ್ದುಲ್ ರಝಾಕ್ ಅಜ್ಮೀರ್, ಎಸ್.ಎಂ. ಆಸೀಫ್ ಇಕ್ಬಾಲ್, ಎಂ.ಎ.ಅಬೂಬಕರ್, ಅಬ್ಬಾಸ್ ಟಿ.ಎಚ್., ಮಜೀದ್ ಮಾಸ್ಟರ್, ಆಸೀಫ್ ಅಕ್ಷರನಗರ, ದಾವೂದ್ ಬಾಷಾ, ನೌಫಲ್ ಜಿ. ಸ್ಥಳೀಯ ಪ್ರಮುಖರಾದ ಚಕ್ಕರ್ ಮೋನಾಕ, ವಿವೇಕ ರೈ, ಪ್ರಭಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾದ್ ಫೌಂಡೇಶನ್‌ನ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ಸ್ವಾಗತಿಸಿದರು. ಯಾದ್ ಫೌಂಡೇಶನ್‌ನ ಗೌರವಾಧ್ಯಕ್ಷ ಹಾಮದ್ ಅಲ್ತಾಫ್, ಪ್ರಧಾನ ಸಂಚಾಲಕ ರಿಯಾಝ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಎನ್, ಸದಸ್ಯರಾದ ಹನೀಫ್ ಕೆಎಂ, ಇರ್ಫಾನ್ ಮಲಾರ್, ಹನೀಫ್ ಕುಂಜತ್ತೂರು ಉಪಸ್ಥಿತರಿದ್ದರು.