ಶಕ್ತಿ ಶಿಕ್ಷಣ ಸಂಸ್ಥೆಯ ಬಬಿತಾ ಸೂರಜ್‌ಗೆ ‘ಯಂಗ್ ಇನ್‌ಸ್ಪೈರಿಂಗ್ ಪ್ರಿನ್ಸಿಪಲ್ ಆಫ್ ದಿ ಇಯರ್’ ಪ್ರಶಸ್ತಿ
Update: 2025-01-22 22:37 IST
ಮಂಗಳೂರು: ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲರಾದ ಬಬಿತಾ ಸೂರಜ್ ಮುಂಬೈನಲ್ಲಿ ಇಂಡಿಯನ್ ಸ್ಕೂಲ್ ಅವಾರ್ಡ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಯಂಗ್ ಇನ್‌ಸ್ಪೈರಿಂಗ್ ಪ್ರಿನ್ಸಿಪಲ್ ಆಫ್ ದಿ ಇಯರ್’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಕೋರ್ಟ್‌ಯಾರ್ಡ್ ಬೈ ಮ್ಯಾರಿಯಟ್‌ನಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನದಲ್ಲಿ ಒಲಿಂಪಿಕ್ಸ್ ಕುಸ್ತಿಪಟು ಗೀತಾ ಫೊಗಾಟ್ ಅವರು ಶಕ್ತಿ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಬಬಿತಾರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಬಬಿತಾ ಅವರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾಯಕ್, ಕಾರ್ಯದರ್ಶಿ ಸಂಜಿತ್ ನಾಕ್, ಪ್ರಧಾನ ಸಲಹೆ ಗಾರರಾದ ರಮೇಶ್ ಕೆ, ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ ಮೂರ್ತಿ ಎಚ್. ಅಭಿನಂದಿಸಿದ್ದಾರೆ.