×
Ad

ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ ಶಿಲಾನ್ಯಾಸ

Update: 2025-01-29 17:59 IST

ಶಿರ್ವ, ಜ.29: ಪಂಜಿಮಾರು ಕೋಡುಗುಡ್ಡೆ ಸಮೀಪ ಪಂಜಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸಕ್ಕೆ ಕೋಡು ಮುಲ್ಕಾಡಿ ಶ್ರೀದುರ್ಗಾಪರಮೆಶ್ವರೀ ದೇವಳದ ಪ್ರಧಾನ ಅರ್ಚಕ ವೇದ ಮೂರ್ತಿ ಲೋಹಿತ್ ಭಟ್ ನೇತೃತ್ವದಲ್ಲಿ ಧಾರ್ಮಿಕ ಪೂಜಾನುಷ್ಟಾನಗಳನ್ನು ನೆರವೇರಿಸಲಾಯಿತು.

ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಉಪಾಧ್ಯಕ್ಷ ಪಾಲಮೆ ನಿತ್ಯಾನಂದ ನಾಯಕ್, ಹಿರಿಯರಾದ ಎಂ.ನಾರಾಯಣ ಕಾಮತ್, ವಸಂತ ಪೂಜಾರಿ, ನಿಕಟಪೂರ್ವ ಅಧ್ಯಕ್ಷೆ ಹರಿಣಾಕ್ಷಿ ಎನ್.ಶೆಟ್ಟಿ, ಬಂಟಕಲ್ಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಪ್ರಭು ಪಾಲಮೆ, ಮುಲ್ಕಾಡಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ದಿನಕರ ಶೆಟ್ಟಿ ಶುಭ ಹಾರೈಸಿದರು.

ಸುಪ್ರೀತಾ ಎಸ್.ಪೂಜಾರಿ, ಶ್ಯಾಮರಾಯ ರಾವ್, ರವಿಕಾಂತ್ ಸುವರ್ಣ ಪಡುಬೆಳ್ಳೆ, ಹಿರಿಯರಾದ ಆನಂದ ಶೆಟ್ಟಿ ಪಂಜಿ ಮಾರು, ಕಟ್ಟಡ ಸಮಿತಿ ಸದಸ್ಯರಾದ ಜಗದೀಶ ಶೆಟ್ಟಿ, ಲಿಲ್ಲಿ ಮೋನಿಸ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣಪತಿ ಪ್ರಭು, ಪ್ರಸಾದ್ ಶೆಟ್ಟಿ, ವಿನಯಾ ಹೆಗ್ಡೆ, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಘದ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಪೂಜಾರಿ ವಲದೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News