×
Ad

ಸುರತ್ಕಲ್‌: ಇಂಜಿನಿಯರ್‌ ಯುವಕ ನಾಪತ್ತೆ

Update: 2025-02-12 22:49 IST

ಸುರತ್ಕಲ್‌: ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಇಂಜಿನಿಯರ್‌ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಆತನ ತಾಯಿ ರಮ್ಲತ್‌ ಎಂಬವರು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುರತ್ಕಲ್‌ ಕೃಷ್ಣಾಪುರ 6ನೇ ಬ್ಲಾಕ್‌ ನಿವಾಸಿ ಮುಹಮ್ಮದ್‌ ಫೈಝಲ್‌ (24) ಕಾಣೆಯಾದವರು ಎಂದು ತಿಳಿದು ಬಂದಿದೆ.

ಮುಹಮ್ಮದ್ ಫೈಜಲ್ ದೇರಳಕಟ್ಟೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ್ದು ನಂತರ ಕೆಲಸ ಹುಡುಕುತ್ತಿದ್ದು ಯಾವುದೇ ಕೆಲಸ ಸಿಕ್ಕಿರಲಿಲ್ಲ. ಇದೇ ಕಾರಣಕ್ಕೆ ಮಾನಸಿಕವಾಗಿ ನೊಂದಿದ್ದ ಆತ ಡಿ.27ರಂದು ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಮನೆಗೆ ಹಿಂದಿರುಗಿಲ್ಲ. ಕುಟುಂಬಿಕರು ಹಾಗೂ ಆತನ ಸ್ನೇಹಿತರಲ್ಲಿ ವಿಚಾರಿಸಿದ ಬಳಿಕವೂ ಆತನ ಪತ್ತೆಯಾಗಿಲ್ಲ ಎಂದು ಆತನ ತಾಯಿ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಾಣೆಯಾಗಿರುವ ಮುಹಮ್ಮದ್‌ ಫೈಝಲ್‌ 5.6 ಅಡಿ ಎತ್ತರ, ಸಾಧಾರಣ ಬಿಳಿ ಮೈ ಬಣ್ಣ, ಸಾಧಾರಣ ಶರೀರ ದುಂಡು ಮುಖ, ಕಪ್ಪು ಕೂದಲು ಹಾಗೂ ಎಡಗೈಯಲ್ಲಿ ಕಪ್ಪು ಮಚ್ಚೆ ಇರುತ್ತದೆ. ಇವರು ಕನ್ನಡ, ಹಿಂದಿ, ಇಂಗ್ಲೀಷ್, ತುಳು, ಬ್ಯಾರಿ ಭಾಷೆ ಮಾತನಾಡುತ್ತಿದ್ದು, ಕಾಣೆಯಾದ ದಿನ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News