×
Ad

ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Update: 2025-02-19 18:07 IST

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಾಮರ್ಥ್ಯ ಪಾಲನಾ ಉಪಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ದ.ಕ.ಜಿಲ್ಲೆಯ 5 ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯ ಹುದ್ದೆಗೆ ಅರ್ಜಿ ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಲಾಗಿದೆ.

ಕಾರ್ಯಕರ್ತೆಯರ ಹುದ್ದೆಗೆ 5,500 ರೂ.ಗೌರವಧನ ಹಾಗೂ ಸಹಾಯಕಿಯರ ಹುದ್ದೆಗೆ 3,000 ರೂ. ಗೌರವಧನ ನೀಡಲಾಗುತ್ತದೆ. ಮಂಗಳೂರು ಗ್ರಾಮಾಂತರದ ನಾಗರಕಟ್ಟೆ ಮತ್ತು ಬಬ್ಬುಕಟ್ಟೆ, ಬಂಟ್ವಾಳ ತಾಲೂಕಿನ ಕೈಕುಂಜೆ ಮತ್ತು ವಿಟ್ಲ ಮಹಿಳಾ ಮಂಡಲ ಮತ್ತು ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ವ್ಯಾಪ್ತಿಯ 18ರಿಂದ 35ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮಾ.7 ಕೊನೆಯ ದಿನವಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದ್ವಿತೀಯ ಪಿಯುಸಿ ಪರೀಕ್ಷೆ/10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ 10/7ನೇ ತರಗತಿಯಲ್ಲಿ ಪಾಸಾಗಿರಬೇಕು ಅಥವಾ ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ವಿದ್ಯಾರ್ಹತೆಯನ್ನು ಪರಿಗಣಿಸುವುದಿಲ್ಲ.

ಅರ್ಜಿ ನಮೂನೆ ಹಾಗೂ ಮಾಹಿತಿಗೆ ಆಯಾ ವ್ಯಾಪ್ತಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಮಂಗಳೂರು ಗ್ರಾಮಾಂತರ ದೂ: 9620636888, ಬಂಟ್ವಾಳ ದೂ: 7760729919, ಪುತ್ತೂರು ದೂ:08251-298788, ವಿಟ್ಲ ದೂ:08255-238080 ಕಚೇರಿ ಅವಧಿಯಲ್ಲಿ ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News