ವ್ಯಕ್ತಿ ನಾಪತ್ತೆ
ಮಂಗಳೂರು, ಫೆ.28: ನಗರದ ಕಪಿತಾನಿಯೋ ಸಮೀಪದ ಮದ್ಯವರ್ಜನ ಮತ್ತು ಪುನರ್ವಸತಿ ಕೇಂದ್ರವಾದ ಕೃಪಾಸದನ ಫೌಂಡೇಶನ್‌ನಿಂದ ವ್ಯಕ್ತಿಯೊಬ್ಬರು ಕಾಣೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 52 ವರ್ಷ ಪ್ರಾಯದ ವಲೇರಿಯನ್ ಲಸ್ರಾದೋ ಕಾಣೆಯಾದ ವ್ಯಕ್ತಿ. ಕಳೆದ ವರ್ಷದ ಜೂನ್ 7ರಂದು ವಲೇರಿಯನ್ ಲಸ್ರಾದೋ ಅವರನ್ನು ಇಲ್ಲಿಗೆ ಸೇರಿಸಲಾಗಿತ್ತು. ಫೆ.17ರಂದು ಪೂ.11:30ಕ್ಕೆ ಇವರನ್ನು ಸೋಮೇಶ್ವರ ದಲ್ಲಿರುವ ಮದ್ಯವರ್ಜನ ಮತ್ತು ಪುನರ್ವಸತಿ ಕೇಂದ್ರಕ್ಕೆ ಸೇರಿಸಲು ಕರೆದೊಯ್ಯುವಾಗ ಫೌಂಡೇಶನ್‌ನ ಗೇಟ್‌ನ ಬಳಿಯಿಂದಲೇ ತಪ್ಪಿಸಿಕೊಂಡವರು ಮತ್ತೆ ಮರಳಲಿಲ್ಲ ಎಂದು ಅವರ ಸಹೋದರ ಬೆನೆಡಿಕ್ಟ್ ಲಸ್ರಾದೋ ದೂರಿನಲ್ಲಿ ತಿಳಿಸಿದ್ದಾರೆ.
5.3 ಅಡಿ ಎತ್ತರದ, ಗೋದಿಮೈಬಣ್ಣದ, ಸಪೂರ ಶರೀರದ, ದುಂಡು ಮುಖದ ವಲೇರಿಯನ್ ಲಸ್ರಾದೋ ಕನ್ನಡ, ತುಳು, ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರನ್ನು ಕಂಡವರು ದೂ.ಸಂ: 2220529/9480805354ನ್ನು ಸಂಪರ್ಕಿಸ ಬಹುದು ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.