×
Ad

ಉಪ್ಪಿನಂಗಡಿ: 'ಉಬಾರ್ ಡೋನಾರ್ಸ್ ಹೆಲ್ಪ್ ಲೈನ್'‌ ವತಿಯಿಂದ ರಂಝಾನ್ ಕಿಟ್ ವಿತರಣೆ

Update: 2025-02-28 23:30 IST

ಉಪ್ಪಿನಂಗಡಿ: ಕಳೆದ ಹತ್ತು ವರ್ಷಗಳಿಂದ ಚಿಕಿತ್ಸೆಗೆ ನೆರವು, ಅಶಕ್ತರಿಗೆ, ಬಡವರಿಗೆ ನೆರವು, ರಂಝಾನ್ ತಿಂಗಳಲ್ಲಿ ಕಿಟ್ ವಿತರಣೆ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳನ್ನು ಸದಾ ನಡೆಸುತ್ತಾ ಬರುತ್ತಿರುವ `ಉಬಾರ್ ಡೋನಾರ್ಸ್ ಹೆಲ್ಫ್ ಲೈನ್' ತಂಡವು ಈ ಬಾರಿಯೂ ಅನಾಥ ವಿಧವೆಯರು, ಅಂಗವೈಕಲ್ಯಕ್ಕೆ ತುತ್ತಾದ ಸುಮಾರು ನಾಲ್ಕು ನೂರು ಕುಟುಂಬಕ್ಕೆ ರಂಝಾನ್ ಕಿಟ್ ವಿತರಿಸಿದೆ.

ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಖತೀಬ್ ಜನಾಬ್ ಸಲಾಂ ಫೈಝಿ ಎಡಪ್ಪಾಲ್‍ರವರು ದುವಾ ನೆರವೇರಿಸುವ ಮೂಲಕ ಉಪ್ಪಿನಂಗಡಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತಮ್ಮ ಸಂಪತ್ತಿನಲ್ಲಿ ಒಂದಂಶವನ್ನು ಸಮಾಜದ ದುರ್ಬಲರಿಗೆ ನೀಡುವುದು ಪುಣ್ಯದ ಕೆಲಸ. ಈಗಿನ ಕಾಲದಲ್ಲಿ ಹಲವಾರು ಸಂಕಷ್ಟಗಳಿಂದ ಮತ್ತು ಹಣಕಾಸಿನ ತೊಂದರೆಯಿಂದ ನಾಡಿನಲ್ಲಿ ಧನಿಕರೆಂದು ಗುರುತಿಸಿಕೊಂಡ ಹಲವರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನೆರವು ನೀಡುವಾಗ ಅಂತವರನ್ನು ಕೂಡಾ ಗುರುತಿಸುವ ಕಾರ್ಯವಾಗಬೇಕು. ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ `ಉಬಾರ್ ಡೋನಾರ್ಸ್ ಹೆಲ್ಫ್‍ಲೈನ್ ಸಂಸ್ಥೆ' ಈ ಕಾರ್ಯ ಅತ್ಯಂತ ಪುಣ್ಯದ ಹಾಗೂ ಗೌರವದ ಕೆಲಸವಾಗಿದೆ ಎಂದರು.

ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮತ್ತು ಅಬ್ದುಲ್ ರವೂಫ್ ಹಾಜಿ ಮಾತನಾಡಿ, ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಇಂತಹ ಸೇವೆಯನ್ನು ನಿರಂತರವಾಗಿ ಮಾಡಿದಾಗ ದೇವನ ಆಶೀರ್ವಾದ ಸದಾ ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಎಚ್. ಯೂಸುಫ್, ಸಮಾಜ ದಲ್ಲಿರುವ ಕಷ್ಟಗಳನ್ನು ಅರಿತು ಸಹಾಯ ಮಾಡುವ ಇಂತಹ ಸಂಸ್ಥೆಯಿಂದ ಅಶಕ್ತರು ನೆಮ್ಮದಿ ಕಾಣುವಂತಾಗಿದೆ ಎಂದರು. 

ಬಳಿಕ ಕಿಟ್‍ಗಳನ್ನು ಅವರವರ ಮನೆಗೆ ಹಂಚುವ ಕಾರ್ಯ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶುಕೂರ್ ಹಾಜಿ ಶುಕ್ರಿಯಾ, ಮುಸ್ತಫಾ ಹಾಜಿ ಆಶ್ರಫ್ ಸಿಟಿ, ಸಿದ್ದೀಕ್ ಕೆಂಪಿ, ಹಾಜಿ ಉಮ್ಮರ್ ಯು.ಎಸ್.ಎಫ್., ಇಬ್ರಾಹಿಂ ಆಚಿ, ಮುಹಮ್ಮದ್ ಕೆಂಪಿ, ಅಝೀಝ್ ಕಿಡ್ಸ್, ಅಶ್ರಫ್ ಡಿಝೈನ್, ದಾವೂದ್ ಪಿಕ್ & ವಾಕ್, ಹನೀಫ್ ಕಡವಿನಬಾಗಿಲು, ಮೋನು ಪಿಲಿಗೂಡು ಮತ್ತು ಬಶೀರ್ ಪೆರಿಯಡ್ಕ, ಉಬಾರ್ ಡೋನರ್ಸ್ ಹೆಲ್ಪ್‍ಲೈನ್‍ನ ಅಧ್ಯಕ್ಷರಾದ ಶಬೀರ್ ಕೆಂಪಿ, ಗೌರವ ಸಲಹೆಗಾರರಾದ ತೌಸೀಫ್ ಯು.ಟಿ., ಇಸ್ಮಾಯಿಲ್ ತಂಙಳ್, ಇರ್ಷಾದ್ ಯು.ಟಿ., ಮುನೀರ್ ಎನ್ಮಾಡಿ, ಶುಕೂರ್ ಮೇದರಬೆಟ್ಟು, ಸದಸ್ಯರಾದ ಶಿಹಾಬ್ ತಂಙಳ್, ನವಾಝ್ ಎಲೈಟ್, ಅನಾಸ್ ದಿಲ್ದಾರ್, ರಿಜ್ವಾನ್ ಎವೈಎಂ, ಶುಕೂರ್ ಕೆಂಪಿ, ಶಬೀರ್ ನಂದಾವರ, ಮುಸ್ತಾಕ್ ಕುದ್ಲೂರ್, ಸಿದ್ದೀಕ್ ಹ್ಯಾಪಿ ಟೈಮ್ಸ್, ಶುಕೂರ್ ಕುಪ್ಪೆಟ್ಟಿ, ಸಿಯಾಕ್ ಕೆಂಪಿ, ಅಬ್ದುಲ್ ಖಾದರ್ ಆದರ್ಶ ನಗರ, ಇಮ್ರಾನ್ ಎವೈಎಂ, ಫಯಾಝ್ ನೆಕ್ಕಿಲಾಡಿ, ನಿಯಾಝ್ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News