×
Ad

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಹೊರೆ ಕಾಣಿಕೆ

Update: 2025-03-02 22:35 IST

ಮಂಗಳೂರು, ಮಾ.2: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋ ತ್ಸವ ಮಾ.1ರಿಂದ ಆರಂಭಗೊಂಡಿದ್ದು, ಮೊದಲ ಹಂತದ ಹಸಿರುವಾಣಿ ಹೊರೆ ಕಾಣಿಕೆ ರವಿವಾರ ಸಂಜೆ ಬೋಂ ದೆಲ್ ಕೆ.ಎಚ್.ಬಿ. ಕಾಲೊನಿ ಮೈದಾನದಿಂದ ಹೊರಟು ಶ್ರೀ ಕ್ಷೇತ್ರಕ್ಕೆ ತಲುಪಿತು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ವೇ.ಮೂ.ಕೆ.ಅನಂತ ಪದ್ಮನಾಭ ಆಸ್ರಣ್ಣ ಉದ್ಘಾಟಿಸಿ, ಆಶೀರ್ವಚನ ನೀಡಿದರು.

ಕೂಳೂರು, ಪಡುಕೋಡಿ, ಪಂಜಿಮೊಗೆರು, ಶಾಂತಿನಗರ, ಗಾಂಧಿನಗರ, ಅತ್ರಬೈಲು, ಕುಂಜತ್ತಬೈಲು, ಕಾವೂರು, ಪಡುಶೆಡ್ಡೆ-ಜಾರ, ಪಚ್ಚನಾಡಿ, ಪದವಿನಂಗಡಿ, ಮೇರಿಹಿಲ್, ಕೊಂಚಾಡಿ, ಮುಗ್ರೋಡಿ ವ್ಯಾಪ್ತಿಯ ಹಸಿರುವಾಣಿ ಹೊ ರೆ ಕಾಣಿಕೆ ನೃತ್ಯ ಭಜನಾ ತಂಡ, ವಿವಿಧ ವೇಷಭೂಷಣ ಹಾಗೂ ವಾದ್ಯ ಘೋಷಗಳೊಂದಿಗೆ ಶ್ರೀ ಕ್ಷೇತ್ರಕ್ಕೆ ವೈಭವದ ಮೆರವಣಿಗೆಯಲ್ಲಿ ಸಾಗಿ ಬಂತು.

ಕಾವೂರು ದೇವಸ್ಥಾನದ ಪ್ರಧಾನ ಅರ್ಚಕ ಕೆ.ಶ್ರೀನಿವಾಸ ಭಟ್, ಬ್ರಹ್ಮಕಲಶೋ ತ್ಸವ ಸಮಿತಿ ಅಧ್ಯಕ್ಷ ಆಶಿಕ್ ಬಳ್ಳಾಲ್ ಕೂಳೂರುಬೀಡು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಮೋಹನ ಪ್ರಭು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅವಿನಾಶ್ ನಾಯ್ಕ ಪಂಜಿಮುಗೆರುಗುತ್ತು, ಪ್ರ.ಕಾರ್ಯದರ್ಶಿ ಸುಧಾಕರ ಆಳ್ವ, ಕೋಶಾಧಿಕಾರಿ ದೀಪಕ್ ಪೂಜಾರಿ, ರಾಮಣ್ಣಶೆಟ್ಟಿ ಮುಗಿಪು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಸುಧಾಕರ ಶೆಟ್ಟಿ ಮುಗ್ರೋಡಿ, ಹೊ ರೆ ಕಾಣಿಕೆ ಸಮಿತಿ ಸಂಚಾಲಕ ರಮಾನಂದ ಭಂಡಾರಿ, ಸಹ ಸಂಚಾಲಕ ನೇಮಿರಾಜ್ ಶೆಟ್ಟಿ ಪಾಂಜಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ. ಉಮಾನಾಥ, ಬಿ. ವೀಣಾ ಆಚಾರ್ಯ, ಗಿರಿಜಾತೆ ಆರ್. ಭಂಡಾರಿ, ಹರೀಶ್ ಆರ್. ಶೆಟ್ಟಿ, ಪುರುಷೋತ್ತಮ ಎನ್. ಪೂಜಾರಿ, ಕೆ. ಸದಾಶಿವ ಶೆಟ್ಟಿ, ದೇವಳದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News