×
Ad

ಅಡ್ಯಾರ್‌: ಯುವಕನಿಗೆ ಚೂರಿ ಇರಿತ; ಪ್ರಕರಣ ದಾಖಲು

Update: 2025-03-15 22:41 IST

ಮಂಗಳೂರು, ಮಾ.15: ಅಡ್ಯಾರು ಬ್ರಹ್ಮಕಲಶೋತ್ಸವ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ದೀಪಾಲಂಕಾರ ತೆಗೆಯುವ ಸಂದರ್ಭದಲ್ಲಿ ಮಾತಿನ ಚಕಮಕಿ ಉಂಟಾಗಿ ಓರ್ವನ ಕೈಗೆ ಚೂರಿಯಿಂದ ಇರಿದಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿರುವುದು ವರದಿಯಾಗಿದೆ.

ಸುರೇಶ್ ಎಂಬವರಿಗೆ ಗಾಯವಾಗಿದೆ. ದೀಪಾಲಂಕಾರ ತೆಗೆಯುವ ಸಂದರ್ಭದಲ್ಲಿ ರೋಡಿನಲ್ಲಿ ಬಿದ್ದಿದ್ದ ಕೇಬಲನ್ನು ತೆಗೆಯುವಾಗ ಬಂದ ಪಿಕಪ್ ಚಾಲಕ ಮನೋಜ್ ಜತೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಅಲ್ಲಿದ್ದ ಊರಿನವರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಆದರೆ ಸ್ಥಳದಿಂದ ತೆರಳಿದ ಮನೋಜ್, ಕಾರಿನಲ್ಲಿ ರತನ್ ಮತ್ತು ಹರ್ಷಿತ್ ಎಂಬವರನ್ನು ಕರೆದುಕೊಂಡು ಬಂದು ಸುರೇಶ್‌ನ ಎಡ ತೋಳಿಗೆ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News