×
Ad

ಅಮಾಯಕ ಯುವಕನ ಕೊಲೆ: ಮಿತ್ತಬೈಲ್ ಕೇಂದ್ರ ಜಮಾಅತ್ ಖಂಡನೆ

Update: 2025-05-28 14:58 IST

ಅಬ್ದುಲ್ ರಹ್ಮಾನ್

ಬಂಟ್ವಾಳ : ತಾಲೂಕಿನ ಕೊಳತ್ತ ಮಜಲು ಎಂಬಲ್ಲಿ ಅಮಾಯಕ ಯುವಕರಿಬ್ಬರ ಮೇಲೆ ತಲ್ವಾರ್ ದಾಳಿ ನಡೆಸಿ ಓರ್ವನನ್ನು ಕೊಲೆಗೈದಿರುವುದನ್ನು ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿಯ ಕೇಂದ್ರ ಆಡಳಿತ ಕಮಿಟಿ ತೀವ್ರವಾಗಿ ಖಂಡಿಸಿದೆ.

ಸಂಘ ಪರಿವಾರದ ನಾಯಕರು ನಡೆಸುತ್ತಿರುವ ಪ್ರತೀಕಾರದ ಭಾಷಣದಿಂದ ಪ್ರೇರಣೆಗೊಂಡವರೇ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದ್ದು ಪೊಲೀಸ್ ಇಲಾಖೆ ಈ ಹತ್ಯೆಯಲ್ಲಿ ಭಾಗಿಗಳಾದವರನ್ನು ತಕ್ಷಣವೇ ಬಂಧಿಸಬೇಕು. ಜಿಲ್ಲೆಯಲ್ಲಿ ಮುಸ್ಲಿಮರ ರಕ್ಷಣೆ ವಿಚಾರದಲ್ಲಿ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಮುಖ್ಯಮಂತ್ರಿ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಮಾಅತ್ ಅಧ್ಯಕ್ಷ ಮುಹಮ್ಮದ್ ಅದ್ದೇಡಿ, ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News