ಮಂಗಳೂರು: ನ್ಯಾಯಾಲಯದ ಗಾಜು ಒಡೆದ ಯುವಕ
Update: 2025-06-14 21:17 IST
ಸಾಂದರ್ಭಿಕ ಚಿತ್ರ
ಮಂಗಳೂರು, ಜೂ.14: ಬಂದರು ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿ ಯೊಬ್ಬ ನ್ಯಾಯಾಲಯದ ನೋಟಿಸ್ ಬೋರ್ಡಿನ ಗಾಜು ಒಡೆದ ಘಟನೆ ನಡೆದಿದೆ.
ಉಳ್ಳಾಲ ಹಳೆಕೋಟೆಯ ಅಬ್ದುಲ್ ಹಫೀಲ್ (19) ನ್ಯಾಯಾಲಯದ ಗಾಜು ಒಡೆದ ಆರೋಪಿಯಾಗಿದ್ದಾನೆ. ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಬಂದರು ಠಾಣೆಯ ಸಿಬ್ಬಂದಿಯು ಆರೋಪಿ ಯನ್ನು ಕರೆದುಕೊಂಡು ಹೋಗಿದ್ದು, ಈ ವೇಳೆ ಆತ ನ್ಯಾಯಾಲಯದ ಬೋರ್ಡ್‌ನ ಗಾಜು ಒಡೆದು ಹಾಕಿದ್ದಾನೆ ಎಂದು ದೂರಲಾಗಿದೆ.
ಈ ಬಗ್ಗೆ ಬಂದರು ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.